ಕಾಪು : ಜ.26 ರಂದು ನಡೆಯಲಿರುವ ನಾರಾಯಣಗುರು ಸ್ತಬ್ಧಚಿತ್ರ ಜಾಥಾ ಯಶಸ್ವಿಗೊಳಿಸುವಂತೆ ಮಾಜಿ ವಿನಯ್‌ ಕುಮಾರ್‌ ಸೊರಕೆ ಮನವಿ – Vishwanews24

Featured, ಉಡುಪಿ

ಕಾಪು : ಜ.26 ರಂದು ನಡೆಯಲಿರುವ ನಾರಾಯಣಗುರು ಸ್ತಬ್ಧಚಿತ್ರ ಜಾಥಾ ಯಶಸ್ವಿಗೊಳಿಸುವಂತೆ ಮಾಜಿ ವಿನಯ್‌ ಕುಮಾರ್‌ ಸೊರಕೆ ಮನವಿ – Vishwanews24

ಕಾಪು: ಬಿಲ್ಲವ ಮಹಾಮಂಡಲದ ನಿರ್ದೇಶನದಂತೆ ಉಡುಪಿ ಜಿಲ್ಲೆಯ ತಾಲೂಕು ಕೇಂದ್ರದಿಂದ ವಿವಿಧ ಸಂಘಸಂಸ್ಥೆಗಳ ಕೂಡಿಕೆ ಯಿಂದ ಪ್ರತಿ ತಾಲೂಕುಗಳಲ್ಲಿ ಆಯೋಜಿಸಲಾದ ನಾರಾಯಣಗುರುಗಳ ಟ್ಯಾಬ್ಲೊ ಮೆರವಣಿಗೆ ಜಾತಿ-ಮತ-ಪಂತ ಮರೆತು ಬೃಹತ್ ವಾಹನ ಜಾಥಾ ಜ.26ರಂದು ಸಂಜೆ 5 ಗಂಟೆಗೆ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ತಲುಪಲಿದೆ.

ಗಣರಾಜ್ಯೋತ್ಸವದ ಪೆರೇಡಿಗೆ ಸರ್ಕಾರವು ಕಳಿಸಿದ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಉಡುಪಿ ಜಿಲ್ಲೆಯ ಸುಮಾರು 34 ಬಿಲ್ಲವ ಸಂಘಟನೆಗಳು ಒಟ್ಟಾಗಿ ಜಿಲ್ಲಾಧಿಕಾರಿಯವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು ಸರ್ಕಾರವು ಸ್ಪಂದನೆ ಮಾಡದಿರುವುದು ವಿಷಾದನೀಯ ಈ ನಿಟ್ಟಿನಲ್ಲಿ ಜಾಥಾವನ್ನು ಆಯೋಜಿಸಲಾಗಿದೆ.

ಸಮಾಜಕ್ಕೆ ಬೆಳಕು ಚೆಲ್ಲಿದ ಅಸ್ಪೃಶ್ಯತೆಯಿಂದ ಸ್ಪರ್ಶತೆಗೆ ತಂದಿರುವ ಸಮಾನತೆಯ ಸಾಮಾಜಿಕ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಎಲ್ಲ ಸಮಾಜ ಬಾಂಧವರು ನಾರಾಯಣಗುರುಗಳ ಅನು ಯಾಯಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಿನಂತಿಸಿದ್ದಾರೆ.

ಉಡುಪಿ:ಜ.26 ರಂದು ನಡೆಯಲಿರುವ ನಾರಾಯಣಗುರು ಸ್ತಬ್ಧಚಿತ್ರ ಜಾಥಾ ʼಸ್ವಾಭಿಮಾನದ ನಡಿಗೆಗೆʼ ಬಜರಂಗದಳ ಬೆಂಬಲ – Vishwanews24

Leave a Reply