ಉಡುಪಿ

ಕಾಪು ತಾಲೂಕು ಆಡಳಿತ ಸೌಧದಲ್ಲಿ ನಿಲುಗಡೆಯಾಗದ ಖಾಸಗಿ ಬಸ್ ಗಳು : ಸ್ಟಾಪ್ ಕೊಡಿಸಲು  ಖುದ್ದು ಬಸ್ ನಲ್ಲಿ ಆಗಮಿಸಿದ ತಹಶೀಲ್ದಾರ್ ಪ್ರತಿಭಾ – Vishwanews24

ಕಾಪು ನೂತನ ಆಡಳಿತಸೌಧದ ಬಳಿ ಸ್ಟಾಪ್ ನೀಡದೆ  ಸಂಚರಿಸುತ್ತಿದ್ದ ಖಾಸಗಿ ಬಸ್ ಗಳು

ಆರ್‌ಟಿಒ ಸೂಚನೆಗೆ ನೋ ಕೇರ್: ಸಾರ್ವಜನಿಕರಿಗೆ ತೊಂದರೆ

ಆಡಳಿತಸೌಧದ ಬಳಿ ಸ್ಟಾಪ್ ಕೊಡಿಸಲು ಖುದ್ದು ಬಸ್ ನಲ್ಲಿ ಆಗಮಿಸಿದ ಕಾಪು ತಹಸೀಲ್ದಾರ್ ಪ್ರತಿಭಾ

ತಹಸೀಲ್ದಾರ್  ಹಲವು ಬಾರಿ ಕೇಳಿಕೊಂಡ ಬಳಿಕ ಸ್ಟಾಪ್ ನೀಡಿದ ಬಸ್‌ ನಿರ್ವಾಹಕ

ಕಾಪು ಬಂಗ್ಲೆ ಮೈದಾನ ಬಳಿಯಿರುವ ನೂತನ ಆಡಳಿತಸೌಧಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಎಲ್ಲ ಬಸ್‌ಗಳನ್ನು ಅಲ್ಲಿ ನಿಲುಗಡೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಸ್ ಮಾಲೀಕರ ಸಂಘಗಳಿಗೆ ಸೂಚನೆ ನೀಡಿದ್ದರೂ ಬಸ್‌ಗಳನ್ನು ನಿಲುಗಡೆ ಮಾಡದೆ ಸಂಚರಿಸುತ್ತಿದ್ದ ಪರಿಣಾಮ ಆಗುವ ತೊಂದರೆ ಮನಗಂಡ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಶುಕ್ರವಾರ ಖುದ್ದು ಬಸ್‌ನಲ್ಲಿ ಆಗಮಿಸಿ ಆಡಳಿತ ಸೌಧ ಮುಂಬಾಗ ಬಸ್ ನಿಲುಗಡೆ ಪಡೆದು ಕಚೇರಿ ತಲುಪಿದರು.

ಆರ್‌ಟಿಒ ಸೂಚನೆಗೆ ನೋ ಕೇರ್: ಸಾರ್ವಜನಿಕರಿಗೆ ತೊಂದರೆ
ಕಾಪು ನೂತನ ಆಡಳಿತ ಸೌಧದಲ್ಲಿ ಶಾಸಕರ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಉಪಖಜಾನಾಧಿಕಾರಿಗಳ ಕಚೇರಿ, ಆಹಾರ ಶಾಖೆ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲುಗಡೆಗೆ ನಿರ್ದೇಶನ ನೀಡುವಂತೆ ಕಾಪು ತಹಸೀಲ್ದಾರ್ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೋರಿದ್ದರು. ಅದರಂತೆ ಸಾರಿಗೆ ಅಧಿಕಾರಿ ಬಸ್ ನಿಲುಗಡೆ ಮಾಡುವಂತೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಕೆನರಾ ಬಸ್ ಮಾಲೀಕರ ಸಂಘ, ಕರಾವಳಿ ಬಸ್ ಮಾಲೀಕರ ಸಂಘ ಹಾಗೂ ಶಿರ್ವ ಬಸ್ ಮಾಲೀಕರ ಸಂಘಕ್ಕೆ 2023 ನವೆಂಬರ್ 3ರಂದು ಸೂಚನೆ ನೀಡಿದ್ದರು. ಆದರೆ ಆ ಬಳಿಕ ಯಾವೊಂದು ಬಸ್‌ಗಳು ನಿಲುಗಡೆ ಮಾಡದೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಹಸೀಲ್ದಾರ್ ಗಮನಕ್ಕೆ ತರಲಾಗಿತ್ತು.

ತಹಸೀಲ್ದಾರ್ ಹಲವಾರು ಬಾರಿ ಕೇಳಿಕೊಂಡ ಬಳಿಕ ಸ್ಟಾಪ್ ನೀಡಿದರು
ಪ್ರತಿನಿತ್ಯ ಬಸ್‌ನಲ್ಲಿ ಬರುವ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಸ್‌ಗಳವರೊಡನೆ ವಾಗ್ವಾದ ನಡೆಸುವ ಪರಿಸ್ಥಿತಿ ಇತ್ತು. ಇದನ್ನು ತಿಳಿದ ತಹಸೀಲ್ದಾರ್ ಶುಕ್ರವಾರ ಉಡುಪಿಯಿಂದ ಖುದ್ದಾಗಿ ಕಾಪುವಿಗೆ ಬಸ್‌ನಲ್ಲಿ ಆಗಮಿಸಿದ್ದರು. ತಹಸೀಲ್ದಾರ್ ನಿರ್ವಾಹಕರಲ್ಲಿ ಹಲವು ಬಾರಿ ಕೇಳಿಕೊಂಡ ಬಳಿಕ ಆಡಳಿತ ಸೌಧ ಮುಂಭಾಗ ನಿಲುಗಡೆ ನೀಡಿದ್ದಾರೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಸ್‌ಗಳನ್ನುನಿಲುಗಡೆ ಮಾಡುವಂತೆ ಸಾರಿಗೆ ಅಧಿಕಾರಿ ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಸೂಚಿಸಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

6 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

7 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

7 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

7 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

8 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

8 hours ago