Featured

ಮಂಗಳೂರು: ಸುಳ್ಳು ಪ್ರಚಾರ ಹಾಗೂ ಮೋದಿಯವರ ಬಗ್ಗೆ ಜನರಲ್ಲಿ ಕಲ್ಪಿತ ಭ್ರಮೆಗಳನ್ನು ಸೃಷ್ಟಿಸಿಬೇಡಿ : ನಿರ್ಮಲಾ ಸೀತಾರಾಮನ್ ಗೆ ದಿನೇಶ್ ಗುಂಡೂರಾವ್ – Vishwanews24

ಮೋದಿ ಗ್ಯಾರಂಟಿ ಎಂಬ ಜಾಹೀರಾತು ಪ್ರಸಾರ ಮಾಡಲು ವೆಚ್ಚ ಮಾಡುತ್ತಿರುವ ಹಣ ಜನರ ಶ್ರಮದ ತೆರಿಗೆ ಹಣವೇ ಅಲ್ಲವೆ.? : ನಿರ್ಮಲಾ ಸೀತಾರಾಮನ್ ಗೆ ದಿನೇಶ್ ಗುಂಡೂರಾವ್ ಪ್ರಶ್ನೆ

ಮಂಗಳೂರು: ಕನ್ನಡಿಗರ ಶ್ರಮದ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿರುವ ನಿರ್ಮಲಾ ಸೀತಾರಾಮನ್ರವರಿಗೆ ಕೆಲ ಪ್ರಶ್ನೆಗಳು. ದಿನದ 24 ಗಂಟೆ ಟಿವಿಯಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಪ್ರಸಾರ ಮಾಡಲು ವೆಚ್ಚ ಮಾಡುತ್ತಿರುವ ದುಡ್ಡು ಯಾರ ಶ್ರಮದ ತೆರಿಗೆ ಹಣ.? ಮೋದಿಯವರು ಅವರ ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ.? ಮೋದಿಯವರು ‘ಮೋದಿ ಗ್ಯಾರಂಟಿ’ ಎಂಬ ಜಾಹೀರಾತಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿರುವ ಹಣ ಜನರ ಶ್ರಮದ ತೆರಿಗೆ ಹಣವೇ ಅಲ್ಲವೆ.? ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ದೇಶದ ಹಣಕಾಸು ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿರುವ ನಿರ್ಮಲಾರವರೆ, ಮೋದಿ ಸರ್ಕಾರ ಕೇವಲ ಜಾಹೀರಾತುಗಳಿಗಾಗಿಯೇ ಸಾವಿರಾರು ಕೋಟಿ ಖರ್ಚು ಮಾಡುತ್ತಿರುವ ಬಗ್ಗೆ ಶ್ವೇತಪತ್ರದಲ್ಲಿ ಯಾಕೆ ಉಲ್ಲೇಖವಿಲ್ಲ.? ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವುದು ಸರ್ಕಾರದ ಹಣವೋ ಅಥವಾ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಹಣವೋ.? ಶ್ವೇತಪತ್ರದಲ್ಲಿ ಜಾಹೀರಾತಿಗೆ ಖರ್ಚು ಮಾಡುತ್ತಿರುವುದು ಯಾವ ಹಣ ಹಾಗೂ ಯಾರ ಹಣ ಎಂದು ಸಾರ್ವಜನಿಕರ ಮುಂದೆ ತೆರೆದಿಡಬೇಕಿತ್ತಲ್ಲವೇ.?

ನಿರ್ಮಲಾರವರೆ,ಯಾವುದೇ ಚಾನೆಲ್ ತಿರುಗಿಸಿದರೂ ಒಂದಲ್ಲ ಒಂದು ಚಾನೆಲ್ನಲ್ಲಿ ‘ಮೋದಿ ಗ್ಯಾರಂಟಿ’ ಹೆಸರಿನ ಜಾಹೀರಾತು ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಪ್ರತಿನಿತ್ಯ ದಿನ ಪತ್ರಿಕೆಗಳಲ್ಲಿ ಮೋದಿ ಗ್ಯಾರಂಟಿ ಜಾಹೀರಾತಿಗಾಗಿ ಪುಟ ಮೀಸಲಿಡಲಾಗಿದೆ. ಕೇವಲ ಜಾಹೀರಾತಿಗಾಗಿ ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿದೆಯೇ.? ನಿಮ್ಮ ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ನಿಜವಾದ ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಜಾಹೀರಾತು ಕೊಡುವ ಅಗತ್ಯ ಯಾಕಿತ್ತು.? ಅಧಿಕಾರದ ಅವಧಿಯಲ್ಲಿ ಕೇವಲ ಭಾಷಣದ ತೌಡು ಕುಟ್ಟಿ ಈಗ ಜಾಹೀರಾತಿಗಾಗಿ ಸಾವಿರಾರು ಕೋಟಿ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಳ್ಳುವುದು ಸಾಧನೆಯೇ.?

ನಿರ್ಮಲಾರವರೆ, ಸಾರ್ವಜನಿಕರ ಸಾವಿರಾರು ಕೋಟಿ ತೆರಿಗೆ ಹಣವನ್ನು ‘ಮೋದಿ ಗ್ಯಾರಂಟಿ’ ಜಾಹೀರಾತಿಗೆ ದುರಪಯೋಗ ಪಡಿಸಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಜಾಹೀರಾತಿನಲ್ಲಿ ಸತ್ಯವನ್ನಾದರೂ ಹೇಳಬೇಕಲ್ಲವೆ.? ಜಾಹೀರಾತಿನಲ್ಲಿ ಮೋದಿಯವರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದಾರೆ ಎಂದು ತೋರಿಸುತ್ತೀರಿ. ಆದರೆ ಬಜೆಟ್ನಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡುತ್ತಿರುವುದಾಗಿ ಹೇಳುತ್ತೀರಿ. 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ ಮೇಲೆ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಕೊಡುವ ಪರಿಸ್ಥಿತಿ ಯಾಕೆ.? ನಿಮ್ಮ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಎಂತಹ ಸುಳ್ಳಿನ ಮೂಟೆ ಎಂದು ಇದರಲ್ಲೇ ತಿಳಿಯುತ್ತದೆ. ಅಲ್ಲವೇ.?

ನಿರ್ಮಲಾರವರೆ, ಲೋಕಸಭೆಯಲ್ಲಿ ಶ್ವೇತ್ರಪತ್ರವನ್ನು UPA ಅವಧಿಯ ಆಡಳಿತವನ್ನು ಟೀಕಿಸಲು ಬಳಸಿದ್ದೀರಿ. ಶ್ವೇತಪತ್ರ ಎಂಬುದು ಸರ್ಕಾರವೊಂದರ ಖರ್ಚು, ವೆಚ್ಚ, ಬಾಬ್ತು,ಆರ್ಥಿಕ ಹಿನ್ನೋಟ ಮತ್ತು ಆರ್ಥಿಕ ಮುನ್ನೋಟದ ನಿಖರ ಅಂಕಿ ಅಂಶದ ದಾಖಲೆ. ಆದರೆ ನೀವು ಮಂಡಿಸಿದ ಶ್ವೇತಪತ್ರ UPA ಆಡಳಿತ ಟೀಕಿಸುವುದಕ್ಕೆ ಸೀಮಿತವಾಯಿತು. ಶ್ವೇತಪತ್ರದಲ್ಲಿ ನಿಮ್ಮ ಸರ್ಕಾರದ ಆರ್ಥಿಕ ವೈಫಲ್ಯದ ಉಲ್ಲೇಖವೇಕಿಲ್ಲ.? ಕಳೆದ ಹತ್ತು ವರ್ಷಗಳಿಂದ ನಿಮ್ಮ ಸರ್ಕಾರ ಕಡಿದು ಗುಡ್ಡೆ ಹಾಕಿದ್ದು ಏನು ಎಂದು ಹೇಳಬೇಕಿತ್ತಲ್ಲವೇ.?

ನಿರ್ಮಲಾರವರೆ, 2014 ರವರೆಗೆ ದೇಶದ ಸಾಲ 54 ಲಕ್ಷ ಕೋಟಿಯಿತ್ತು. ಆದರೆ ನೀವು ಮತ್ತು ಕೆಲವು ಅಂಧಭಕ್ತರ ಪಾಲಿನ ಅವತಾರ ಪುರುಷ ಮೋದಿಯವರು ಕೇವಲ ಹತ್ತು ವರ್ಷದಲ್ಲಿ ದೇಶದ ಸಾಲವನ್ನು 171 ಲಕ್ಷ ಕೋಟಿಯ ಗಡಿ ದಾಟಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶದ ಸಾಲ ದಾಖಲೆಯ 211% ರಷ್ಟು ಏರಿಕೆಯಾಗಿದೆ. ನಿಮ್ಮ ಮೋದಿ ಮಾಡಿರುವ ಸಾಲದಿಂದ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ ₹1.30 ಲಕ್ಷ ಸಾಲದ ಹೊರೆ ಬಿದ್ದಿದೆ. ಯಾರ ಉದ್ಧಾರಕ್ಕಾಗಿ ಮೋದಿಯವರು ಇಷ್ಟೊಂದು ಸಾಲ ಮಾಡಿದರು.? ನಿಮ್ಮ ಸರ್ಕಾರ ಈ ಪ್ರಮಾಣದಲ್ಲಿ ಸಾಲ ಮಾಡಿದ್ದು ಯಾಕೆ ಎಂಬುದು ಶ್ವೇತಪತ್ರದಲ್ಲಿ ಉಲ್ಲೇಖವಾಗಬೇಕಿತ್ತಲ್ಲವೇ.? ಶ್ವೇತಪತ್ರದಲ್ಲಿ ಸಾಲದ ಬಗ್ಗೆ ಪ್ರಸ್ತಾಪ ಮಾಡಲು ನಿಮಗೆ ಅಪಥ್ಯವಾಯಿತೆ.?

ನಿರ್ಮಲಾರವರೆ, ನೀವು ಈ ದೇಶದ ಹಣಕಾಸು ಮಂತ್ರಿ. ಆದರೆ ನೀವು ಹಿಟ್ಲರ್ ಸಂಪುಟದ ಪ್ರೊಪಗ್ಯಾಂಡ ಮಿನಿಸ್ಟರ್ ಗೋಬೆಲ್ಸ್ನಂತೆ ವರ್ತಿಸುತ್ತಿದ್ದೀರಿ. ಹಿಟ್ಲರ್ ಮಾಡಿದ್ದ ದುಷ್ಕೃತ್ಯಗಳನೆಲ್ಲಾ ಗೋಬೆಲ್ಸ್ ಮಹತ್ಕಾರ್ಯ ಎಂದು ಜರ್ಮನ್ನರಲ್ಲಿ ಪ್ರಚಾರ ಮಾಡಿ ಭ್ರಮೆ ಸೃಷ್ಟಿಸುತ್ತಿದ್ದ. ಜರ್ಮನ್ನರಿಗೆ ಹಿಟ್ಲರ್ನ ಅಸಲಿ ಮುಖ ತಿಳಿಯುವ ಹೊತ್ತಿಗೆ ಜರ್ಮನಿಯೇ ನಾಶವಾಗಿತ್ತು. ನಿಮ್ಮಲ್ಲಿ ವಿನಂತಿಯೇನೆಂದರೆ ಸುಳ್ಳು ಪ್ರಚಾರ ಹಾಗೂ ಮೋದಿಯವರ ಬಗ್ಗೆ ಜನರಲ್ಲಿ ಕಲ್ಪಿತ ಭ್ರಮೆಗಳನ್ನು ಸೃಷ್ಟಿಸಿ ಭಾರತವನ್ನು ಇನ್ನೊಂದು ಜರ್ಮನಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

5 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

5 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

6 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

6 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

6 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

6 hours ago