ಕಾಪು: ತೆಂಕ ಗ್ರಾ. ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಮಂಜೂರು – viswhanews24
ಕಾಪು: ತೆಂಕ ಗ್ರಾ. ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಮಂಜೂರು
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಫೆ.16 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.
ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಕೋಡ್ದಬ್ಬು ದೈವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ – 10 ಲಕ್ಷ, ತೆಂಕ ನಾಥು ಮುಖಾರಿ ಮನೆ ಹತ್ತಿರದಿಂದ ಭೋಜ ದೇವಾಡಿಗ ಮನೆ ತನಕ ರಸ್ತೆ ಅಭಿವೃದ್ಧಿ – 10 ಲಕ್ಷ, ಅದಮಾರು ರಸ್ತೆಯಿಂದ ಶ್ರೀಧರ್ ದೇವಾಡಿಗ ಮನೆ ತನಕ ರಸ್ತೆ ಅಭಿವೃದ್ಧಿ – 10 ಲಕ್ಷ, ಬ್ರಹ್ಮಸ್ಥಾನ ಬಳಿಯಿಂದ ಕುಶಲ ಕರ್ಕೇರ ಮನೆ ಬಳಿ ರಸ್ತೆ ಅಭಿವೃದ್ಧಿ – 10 ಲಕ್ಷ, ದಿ. ವಾರಿಜಾ ಶೆಟ್ಟಿ ಅವರ ಮನೆಯಿಂದ ಕುಸುಲೊಟ್ಟು ಮಂಜತ್ತಾಯ ಮೂಲಸ್ಥಾನ ವರೆಗೆ ರಸ್ತೆ ಅಭಿವೃದ್ಧಿ – 10 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚದ ರಸ್ತೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಇದನ್ನೂ ಓದಿ :
ಮಂಗಳೂರು : ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಇನ್ನು ಮುಂದೆ ಯುಪಿಐ ಸೌಲಭ್ಯ – vishwanews24
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಾರದಾ ಕೆ. ಪೂಜಾರಿ, ಕೇಶವ ಮೊಯಿಲಿ, ತೆಂಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಖ ಸಿ. ಪೂಜಾರಿ, ಮಾಜಿ ಉಪಾಧ್ಯಕ್ಷರಾದ ರತ್ನಾಕರ ಕೋಟ್ಯಾನ್, ಮಾಜಿ ಸದಸ್ಯರಾದ ಜಯಶ್ರೀ, ಸಂತೋಷ್, ಮನೋಜ್ ಶೆಟ್ಟಿ, ಅಮ್ಮಣ್ಣಿ ಕುಂದರ್, ಸುಂದರಿ, ಶಿವಪ್ರಸಾದ್ ಎಲ್ಲದಡಿ, ವಿನಯ್ ಹೆಗ್ಡೆ, ಮಾಜಿ ಮಂಡಲ ಅಧ್ಯಕ್ಷರಾದ ವೈ ಗೋಪಾಲ ಶೆಟ್ಟಿ, ತೆಂಕ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಜಯ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
