ಕಾಪು : ನಾಪತ್ತೆಯಾಗಿದ್ದ ವ್ಯಕ್ತಿ ಮುಂಬಯಿಯಲ್ಲಿ ಪತ್ತೆ – vishwanews24

Featured, ಉಡುಪಿ

ಕಾಪು : ನಾಪತ್ತೆಯಾಗಿದ್ದ ವ್ಯಕ್ತಿ ಮುಂಬಯಿಯಲ್ಲಿ ಪತ್ತೆ

ಕಾಪು: ತರಕಾರಿ ತರುವುದಾಗಿ ಹೇಳಿ ಪೇಟೆಗೆ ತೆರಳಿ, ಬಳಿಕ ನಾಪತ್ತೆಯಾಗಿದ್ದ ಮೂಲತಃ ಕುಂಜೂರು ನಿವಾಸಿ, ಪ್ರಸ್ತುತ ಕಾಪು ಉಳಿಯಾರಗೋಳಿಯಲ್ಲಿ ವಾಸವಿರುವ ರಾಮ ದೇವಾಡಿಗ (64) ಅವರು ಮುಂಬಯಿಯಲ್ಲಿ ಪತ್ತೆಯಾಗಿದ್ದಾರೆ.

ಎರಡು ತಿಂಗಳ ಹಿಂದೆ ದುಬಾೖನಿಂದ ಮರಳಿದ್ದ ಅವರು ಕಾಪು ಪೇಟೆಯಲ್ಲಿ ಚಹಾ ಮಾರುತ್ತಿದ್ದು, ಜ. 10ರಂದು ಮಧ್ಯಾಹ್ನ 1 ಗಂಟೆಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಶಾಲಿನಿ ಕಾಪು ಪೊಲೀಸ್‌ ಠಾಣೆಗೆ ನೀಡಿದ್ದರು.

ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಅವರನ್ನು ಮುಂಬಯಿಯ ವರ್ಲಿ ಸೆಂಚುರಿ ಬಜಾರ್‌ನಲ್ಲಿರುವ ಮೋಡರ್ನ್ ಕೆಫೆಯಲ್ಲಿ ಮುಂಬಯಿಯಲ್ಲಿರುವ ಕುಂಜೂರು ಕಟ್ಟಪುಣಿ ನಿವಾಸಿ ಚಂದ್ರ ದೇವಾಡಿಗ ಅವರು ಗುರುತು ಹಿಡಿದಿದ್ದರು. ಬಳಿಕ ಊರಿನಲ್ಲಿರುವ ಸಹೋದರನಿಗೆ ಅವರು ಮಾಹಿತಿ ನೀಡಿದ್ದಾರೆ.
ಸಂಬಂಧಿಕರು ಅವರನ್ನು ಊರಿಗೆ ಕರೆದುಕೊಂಡು ಬಂದಿದ್ದು, ಪೊಲೀಸರ ಮುಂದೆ ಹಾಜರುಪಡಿಸಿ ನಾಪತ್ತೆ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

Leave a Reply