ಕಾಪು : ಪಾಂಗಾಳ ಮಟ್ಟು ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ – vishwanews24

Featured, ಉಡುಪಿ

ಕಾಪು : ಪಾಂಗಾಳ ಮಟ್ಟು ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ

ಕಾಪು: ಕಾಪು ತಾಲೂಕು ಮಟ್ಟು ಗ್ರಾಮದ ಪಾಂಗಾಳ ಮಟ್ಟುವಿನಲ್ಲಿ ಹರಿಯುತ್ತಿರುವ ಪಾಪನಾಶಿನಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿರುವುದನ್ನು ಕಾಪು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪಾಪನಾಶಿನಿ ನದಿಯ ದಡದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಕ್ರೈಂ ಎಸ್‌ಐ ಶುಭಕರ್ ಅವರಿಗೆ ಸಿಕ್ಕಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ನದಿಯ ದಡದಲ್ಲಿ 10,000 ರೂ. ಮೌಲ್ಯದ 2 ಯೂನಿಟ್‌ನಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವುದು ಕಂಡುಬಂದಿತ್ತು.

ಚಿತ್ರದುರ್ಗ ಬಸ್ ದುರಂತ : ಹಾಸನ ಮೂಲದ ಇಬ್ಬರು ಯುವತಿಯರು ಕಣ್ಮರೆ – vishwanews24

ನದಿಯಿಂದ ಮರಳನ್ನು ಕಳವು ಮಾಡಿ ದಡದಲ್ಲಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಗಳು ಮತ್ತು ಕಳವಿಗೆ ಬಳಸಿದ ಸಲಕರಣೆಗಳು ಪತ್ತೆಯಾಗಿಲ್ಲ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply