ಕಾಪು : ಪಾದೂರು, ಹೇರೂರು ಪರಿಸರದಲ್ಲಿ ಚಿರತೆ ಕಾಟ – ಆತಂಕದಲ್ಲಿ ಗ್ರಾಮಸ್ಥರು – vishwanews24

Featured, ಉಡುಪಿ

ಕಾಪು : ಪಾದೂರು, ಹೇರೂರು ಪರಿಸರದಲ್ಲಿ ಚಿರತೆ ಕಾಟ – – ಆತಂಕದಲ್ಲಿ ಗ್ರಾಮಸ್ಥರು

ಕಾಪು : ಮಜೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾದೂರು ಮತ್ತು ಹೇರೂರು ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ತೀವು ಆತಂಕಿತರಾಗಿದ್ದಾರೆ.

ಪಾದೂರು ಐಎಸ್‌ಪಿಆ‌ಎಲ್‌, ಸಿಎಸ್‌ಐ ಚರ್ಚ್, ಹೇರೂರು ಮತ್ತು ವಳದೂರುದಲ್ಲಿ ಚಿರತೆ ಓಡಾಡುತ್ತಿದ್ದು ಈ ಪರಿಸರದಲ್ಲಿ ಜನ ಓಡಾಡಲು ಹೆದರುವಂತಾಗಿದೆ. ಸೋಮವಾರ ರಾತ್ರಿ ಪಾದೂರು ಚರ್ಚ್ ಹಿಂಬದಿಯಲ್ಲಿರುವ ವಯೋವೃದ ಜಾರ್ಜ್ ಬಂಗೇರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು. ಭಯದಿಂದಲೇ ಮನೆಯವರು ರಾತ್ರಿಯಿಡೀ ನಿದ್ರೆ ಬಿಟ್ಟು ಎಚ್ಚರದಿಂದಲೇ ಕುಳಿತುಕೊಳ್ಳುವಂತಾಗಿತ್ತು.

ಮಣಿಪಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ – vishwanews24

ಬುಧವಾರ ಬೆಳಿಗೆ ಹೇರೂರು ನಿವಾಸಿ ವಿದ್ಯಾ ಪ್ರಭು ಅವರು ಹೂವು ಕೊಯ್ಯುತ್ತಿದ್ದಾಗ ಚಿರತೆ ಗುಟುರು ಹಾಕಿದ್ದು ತತ್‌ಕ್ಷಣ ಓಡಿ ತಪ್ಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಭಯಭೀತಿಯಿಂದ ಬದುಕಬೇಕಾಗಿದೆ. ಎನ್ನುತ್ತಾರೆ ಸ್ಥಳೀಯರು. ಪಾದೂರು, ಕೂರಾಲು, ವಳದೂರು, ಹೇರೂರು ಪರಿಸರದಲ್ಲಿ ಚಿರತೆ ಹಾವಳಿಯನ್ನು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಕಾಪು ತಾಲೂಕು ವ್ಯಾಪ್ತಿಯಲ್ಲಿ ಒಂದೇ ಬೋನು ಇದ್ದು ಸಮಸ್ಯೆ ಉಂಟಾಗಿದೆ.

ಸದ್ಯ ಕುರ್ಕಾಲು ಪರಿಸರದಲ್ಲಿ ಇರಿಸಲಾಗಿದ್ದ ಬೋನನ್ನು ಬುಧವಾರ ಸಂಜೆ ಪಾದೂರು-ಹೇರೂರು ಪರಿಸರದಲ್ಲಿ ತಂದು ಇರಿಸಲಾಗಿದೆ ಎಂದು ಮಜೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪುಸಾದ್ ಶೆಟ್ಟಿ ವಳದೂರು ತಿಳಿಸಿದ್ದಾರೆ.

ಉಡುಪಿ  : ಕಮಲಶಿಲೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿದ ಕುಬ್ಜಾನದಿ  – vishwanews24

Leave a Reply