ಕಾಪು ಪುರಸಭಾ ಚುನಾವಣೆ:ಬಿಜೆಪಿಯ ಗೆಲುವಿನಲ್ಲಿ ಅವಿರತ ಶ್ರಮ ವಹಿಸಿದ ಜಿಲ್ಲಾ ನಾಯಕರು ರಾಜ್ಯ ಮುಖಂಡರು ಸಕ್ಸಸ್ – ಯಾರ್ಯಾರು ಇದ್ರು ನೋಡಿ ಈ ವರದಿಯಲ್ಲಿ: vishwanews24
ಕಾಪು ಪುರಸಭಾ ಚುನಾವಣೆ:ಬಿಜೆಪಿಯ ಗೆಲುವಿನಲ್ಲಿ ಅವಿರತ ಶ್ರಮ ವಹಿಸಿದ ಜಿಲ್ಲಾ ನಾಯಕರು ರಾಜ್ಯ ಮುಖಂಡರು ಸಕ್ಸಸ್ – ಯಾರ್ಯಾರು ಇದ್ರು ನೋಡಿ ಈ ವರದಿಯಲ್ಲಿ: vishwanews24
ಕಾಪು :ಪುರಸಭಾ ಚುನಾವಣೆಯ ಫಲಿತಾಂಶದ ಪ್ರಕಾರ ಬಿಜೆಪಿ 12 ಸೀಟನ್ನು ಗೆಲ್ಲುವ ಮುಖಾಂತರ ಕಾಪು ಪುರಸಭೆಯ ಗದ್ದುಗೆಯನ್ನು ಏರಿದೆ.

ಪುರಸಭೆಯಲ್ಲಿ ಬಿಜೆಪಿಗೆ ಪಟ್ಟ ದೊರಕಲು ಸಾವಿರಾರು ಬಿಜೆಪಿಯ ದೇವದುರ್ಲಭ ಕಾರ್ಯಕರ್ತರು ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ಜಿಲ್ಲಾ ಮುಖಂಡರು ಮತ್ತು ರಾಜ್ಯ ನಾಯಕರ ಪರಿಶ್ರಮದ ವರದಿ ಹೀಗಿದೆ.

ಜಿಲ್ಲಾಧ್ಯಕ್ಷ ಹಾಗೂ ಕಾಪು ಕ್ಷೇತ್ರಾಧ್ಯಕರಾದ ಸುರೇಶ್ ನಾಯಕ್ ಮತ್ತು ಶ್ರೀಕಾಂತ್ ನಾಯಕ್ ರ ಗೇಮ್ ಬಿಜೆಪಿ ಗದ್ದುಗೇರಲು ಸಹಕಾರಿಯಾಗಿದೆ ಎಂದರು ತಪ್ಪಾಗಲಾರದು.

ಚುನಾವಣಾ ಉಸ್ತುವಾರಿ ಮಟ್ಟಾರ್ ರತ್ನಾಕರ್ ಹೆಗ್ಡೆಯ ಚಾಣಕ್ಷ ನಡೆ ಮತ್ತು ಕಾರ್ಯಕರ್ತರ ನಾಡಿಮಿಡಿತಕ್ಕೆ ತಕ್ಕಂತೆ ಮಾಡಿದ ಪ್ಲ್ಯಾನ್ ಹನ್ನೆರಡು ವಾರ್ಡು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಪೈಕಿ ಕಳೆದ ಬಾರಿ ಕೊಪ್ಪಲಂಗಡಿ ವಾರ್ಡಿನಲ್ಲಿ ಕಾಂಗ್ರೆಸ್ ನ ಹಿಡಿತವಿದ್ದ ವಾರ್ಡ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಕೀಯ ಚತುರ ಕೀರ್ತಿಶೇಷ ಜಗದೀಶ್ ಆಚಾರ್ಯ ರನ್ನು ಸೋಲಿಸಿದ ವಾರ್ಡಗಿತ್ತು.ಮಾತ್ರವಲ್ಲದೆ ಈ ವಾರ್ಡ್ ಗೆದ್ದರೆ ಕಾಪು ಪುರಸಭೆ ಗೆದ್ದಂತೆ ಎಂಬ ಮಾತು ಕೂಡ ಹರಿದಾಡುತ್ತಿತ್ತು. ಅದೇ ಸಮಯಕ್ಕೆ ಆ ವಾರ್ಡಿನ ಉಸ್ತುವಾರಿಯ ಜವಾಬ್ದಾರಿ ಸಿಕ್ಕಿದ್ದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಪ್ಪೆಟ್ಟು ಪ್ರವೀಣ್ ಶೆಟ್ಟಿಗೆ, ಎರಡು ಸುತ್ತಿನ ಫೀಲ್ಡ್ ನಲ್ಲೂ ಕೂಡ ಪಾಸಿಟಿವ್ ಫಲಿತಾಂಶ ಬಾರದ ಸಮಯವದು, ಅಂದು ಸುದ್ದಿಗಾಗಿ ಕಲೆಹಾಕಲು ವಾರ್ಡ್ ಗೆ ಹೋಗಿದ್ದ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದರು ” ಈ ಬಾರಿಯ ಕೊಪ್ಪಲಂಗಡಿ ವಾರ್ಡ್ ಕಮಲಪಾಲಯದ ಪಾಲಾಗಳಿದೆ ಇದನ್ನು ಗೆಲ್ಲಿಸಿಯೇ ಪುರಸಭೆ ಗದ್ದುಗೇರುವುದು ಗ್ಯಾರಂಟಿ ಓಪನ್ ಚಾಲೆಂಜ್ ” ಮಾಡಿದ್ದರು ಕಡೇಯ ಸುತ್ತಿನಲ್ಲಿ ಖುದ್ದಾಗಿ ಫೀಲ್ಡ್ಮ್ ಗೆ ಇಳಿದು ಮಾಡಿದ ಮಾಸ್ಟರ್ ಪ್ಲ್ಯಾನ್ ಕಾಂಗ್ರೆಸ್ ನ ಭದ್ರಕೋಟೆಯನ್ನು ಛಿದ್ರಮಾಡುವಲ್ಲಿ ಯಶಸ್ವಿಯಾಯಿತು.

ಇಪ್ಪತ್ತಮೂರು ವಾರ್ಡಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿಯ ಮುಗ್ಧ ಮನಸ್ಸು ಪ್ರೀತಿಯ ಮಾತು ಮತದಾರರ ಮನಸ್ಸು ಬದಲು ಮಾಡಿತ್ತು ಅಲ್ಲದೆ ಗೊಂದಲದ ವಾರ್ಡನ್ನು ಶೇಕಡಾ 75% ಸರಿ ಮಾಡುವಲ್ಲಿ ಯಶಸ್ವಿಯಾದರು.

ಇನ್ನು ಯಶ್ಪಾಲ್ ಸುವರ್ಣ ಕಾಪು ಭಾಗದ ಯುವಕರನ್ನ ಮನವೊಲಿಸಲು ನಡೆಸಿದ ಪ್ರಯತ್ನದಿಂದಾಗಿ ಕೋಸ್ಟಲ್ ಭಾಗದ ಇಷ್ಟು ಸೀಟ್ ಗೆಲ್ಲಲು ಕಾರಣ ಎಂಬ ಮಾಹಿತಿಯು ಇದೆ.
ಇನ್ನೂ ಮಹಿಳಾ ನಾಯಕಿಯರು ಕೂಡ ಮಾಡಿದ ಕೆಲಸಗಳು ಮತಯಾಚನೆ ಕಾರ್ಯಕರ್ತರಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.
23 ವಾರ್ಡಿಗೂ ಸಂಚಾರ ಮಾಡಿ ಪಕ್ಷದ ಹಿರಿಯರನ್ನ ಸಂಪರ್ಕಿಸಿ ಕಿರಿಯ ಕಾರ್ಯಕರ್ತರ ಜತೆಗಿದ್ದು ಪ್ರೋತ್ಸಾಹಿಸುವ ಬಿಜೆಪಿ ಆಡಳಿತ ತರುವ ಪಟ್ಟಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶಾ ನಾಯಕ್ ಪಾತ್ರ ಮಹತ್ವದ್ದಾಗಿತ್ತು.

ವಿಜಯಸಂಭ್ರಮದಲ್ಲಿ ಗೈರಾದ ನಾಯಕರು
ಇಂದು ಫಲಿತಾಂಶದ ಪಟ್ಟಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಳುಮುಟ್ಟಿತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಕ್ಷೇತ್ರ ಮಟ್ಟದ ನಾಯಕರು ಬಿಟ್ಟರೆ ಚುನಾವಣೆಯ ಯಶಸ್ಸಿನ ರುವಾರಿಗಳು ಬಾರದೇ ಇರುವುದು ಹೊಸ ಸಂಚಲನವನ್ನು ಉಂಟುಮಾಡಿದೆ.
ಒಟ್ಟಾರೆ ಇಂದಿನ ಬಿಜೆಪಿ ಫಲಿತಾಂಶ ಕಾರ್ಯಕರ್ತರ ಶ್ರಮದ ಫಲ ಎಂದು ನಾಯಕರ ಸ್ಟೇಟ್ಮೆಂಟ್ ಆಗಿದೆ.
ಬ್ಯುರೋ ರಿಪೋರ್ಟ್- ಪೊಲಿಟಿಕಲ್ ಹೆಡ್

