ಕಾಪು ಪುರಸಭಾ ಚುನಾವಣೆಯಲ್ಲಿ SDPI ಮೂರು ಸೀಟ್ ಗೆದ್ದಿರುವುದರಿಂದ ಉಡುಪಿ ಶಾಸಕ ರಘುಪತಿ ಭಟ್ ಭಯಭೀತರಾಗಿದ್ದಾರೆ : ಎಸ್ಡಿ.ಪಿ.ಐ ಮುಖಂಡ ಅಥಾವುಲ್ಲ ಜೋಕಟ್ಟೆ:vishwanews24
ಕಾಪು ಪುರಸಭಾ ಚುನಾವಣೆಯಲ್ಲಿ SDPI ಮೂರು ಸೀಟ್ ಗೆದ್ದಿರುವುದರಿಂದ ಉಡುಪಿ ಶಾಸಕ ರಘುಪತಿ ಭಟ್ ಭಯಭೀತರಾಗಿದ್ದಾರೆ : ಎಸ್ಡಿ.ಪಿ.ಐ ಮುಖಂಡ ಅಥಾವುಲ್ಲ ಜೋಕಟ್ಟೆ
ಉಡುಪಿ: ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಉಡುಪಿಯಲ್ಲಿ ಆರಂಭವಾದ ಹಿಜಾಬ್ ಮತ್ತು ವಿವಾದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದೆ.
ಈ ಬಗ್ಗೆ ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ಮಾತನಾಡಿ” ಕಾಪು ಪುರಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಮೂರು ಸೀಟು ಗೆದ್ದಿರುವ ವಿಚಾರದಿಂದ ಉಡುಪಿ ಶಾಸಕ ರಘುಪತಿ ಭಟ್ ಭಯಭೀತರಾಗಿದ್ದಾರೆ ಹಾಗಾಗಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಎಸ್ಡಿಪಿಐ ಪಕ್ಷದಲ್ಲಿ ಸರ್ವ ಜನಾಂಗದವರು ಕೂಡ ಮತವನ್ನು ಹಾಕುವ ಮುಖಾಂತರ ಬೆಂಬಲ ನೀಡಿದ್ದಾರೆ ಎಂದರು.
ಭಾರತೀಯ ಜನತಾ ಪಾರ್ಟಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಅಸ್ತ್ರವನ್ನಾಗಿ ಮತ್ತು ಕೇಸರಿ ವಿವಾದವನ್ನು ಉಡುಪಿಯಲ್ಲಿ ಹುಟ್ಟುಹಾಕಿದೆ ಎಂದು ಗಂಭೀರ ಆರೋಪ ಮಾಡಿದರು.

