ಕಾಪು ಪುರಸಭಾ ಚುನಾವಣೆ- ಮತಯಾಚನೆಗಿಳಿದ ಗುರ್ಮೆ ಸುರೇಶ್ ಶೆಟ್ಟಿಯನ್ನು ಆನಂದಬಾಷ್ಪ ಹರಿಸಿ ಬರ ಮಾಡಿಕೊಂಡ ಮತದಾರರು.vishwanews24

Featured, ರಾಜ್ಯ ನ್ಯೂಸ್

ಕಾಪು ಪುರಸಭಾ ಚುನಾವಣೆ- ಮತಯಾಚನೆಗಿಳಿದ ಗುರ್ಮೆ ಸುರೇಶ್ ಶೆಟ್ಟಿಯನ್ನು ಆನಂದಬಾಷ್ಪ ಹರಿಸಿ ಬರ ಮಾಡಿಕೊಂಡ ಮತದಾರರು.

ಕಾಪು: ಇಲ್ಲಿನ ಪುರಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಾರ್ಟಿಯ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ, ರಾಜ್ಯ, ಜಿಲ್ಲಾ, ಕ್ಷೇತ್ರ ಮಟ್ಟದ ಬಿಜೆಪಿ ಧುರಿಣರು ಫೀಲ್ಡ್ಗೆ ಇಳಿದು ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿದ್ದಾರೆ.


ಆದಿತ್ಯವಾರ ಬಿಜೆಪಿಯ ಮಹಾ ಅಭಿಯಾನ ಪ್ಲಾಪ್ ಶೋ ಕಂಡರು ಕೂಡ ಗುರ್ಮೆ ಸುರೇಶ್ ಶೆಟ್ಟಿ ಹೋದ ವಾರ್ಡಿನಲ್ಲಿ ಹಿರಿಯರೆಲ್ಲರೂ ಮುಂದೆ ಬಂದು ಸ್ವಾಗತಿಸಿದ ಘಟನೆ ನಡೆದಿದೆ.
ಯುವಕರ ಪಡೆಯಂತು ಗುರ್ಮೆ ಸುರೇಶ್ ಶೆಟ್ಟಿಯ ಜತೆಗೆನೆ ನಿಂತು ಮತಯಾಚನೆ ನಡೆಸಿದ್ದು ವಿಶೇಷವಾಗಿತ್ತು, ಮನೆಯಲ್ಲಿದ್ದ ಹಿರಿಯರು ಗುರ್ಮೆ ಸುರೇಶ್ ಶೆಟ್ಟಿಯನ್ನು ಕಂಡು ಕೋವಿಡ್ ಸಮಯಲ್ಲಿ ಮಾಡಿದ ಉಪಕಾರವನ್ನು ಸ್ಮರಣೆ ಮಾಡಿಕೊಂಡು ಬಾಯ್ತುಂಬ ಹಾರೈಸಿ ಹರಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಆನಂದಭಾಷ್ಪ ಹರಿಸಿದ ಹಿರಿಯರು
ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ ಸಂಧರ್ಭದಲ್ಲಿ ಮತದಾರ ಗುರ್ಮೆ ಸುರೇಶ್ ಶೆಟ್ಟಿಯನ್ನು ಕಂಡು ಆನಂದಭಾಷ್ಪ ಹರಿಸಿದ ಘಟನೆಯೂ ನಡೆದಿದೆ, ಕಾರಲ್ಲಿ ಇಳಿಯುತ್ತಿರುವ ಸಮಯದಲ್ಲಿ ಹಿರಿಯ ಜೀವಗಳು ಹತ್ತಿರ ಬಂದು ಬಿಗಿದಪ್ಪಿ ಅತ್ಯಂತ ಪ್ರೀತಿಯಿಂದ ಮಾತಾಡಿಸಿ ಶುಭ ಹಾರೈಸಿದರು ಎಂದು ತಿಳಿದು ಬಂದಿದೆ.
ಗುರ್ಮೆ ಸುರೇಶ್ ಶೆಟ್ಟಿ ಕಾಪು ಭಾಗದಲ್ಲಿ ಅತ್ಯಂತ ಚಿರಪರಿಚಿತರು ಮತ್ತು ಎಲ್ಲಾ ವರ್ಗದ ಜನರನ್ನು ಕೂಡ ಅತ್ಯಂತ ಪ್ರೀತಿಯಿಂದ ಗೌರವಿಸಿ ಮಾತಾಡಿಸುವುದು ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಿ ನೆರವಾದ ಕೀರ್ತಿ ಶೆಟ್ಟಿಯವರಿಗೆ ಇದೆ. ಕೋವಿಡ್ ಸಮಯದಲ್ಲಿ ಎರೆಡೆರಡು ಬಾರಿ ಬಡ ಕುಟುಂಬಗಳಿಗೆ ಪಡಿತರ ಕಿಟ್ ಮುಟ್ಟಿಸಿದ್ದು ಮತ್ತು ಅಂಬ್ಯುಲೆನ್ಸ್ ನೀಡಿಯೂ ಸಹಕರಿಸಿದ್ದನ್ನು ಜನ ಇಂದಿಗೂ ಮರೆತಿಲ್ಲ .

ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24