ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ “ತೆರಿಗೆ ಏರಿಕೆ” ಗೊಂದಲ.

ಉಡುಪಿ

ಕಾಪು: ಸುಮಾರು ಎರಡು ವರ್ಷಗಳ ನಂತರ ಅಧ್ಯಕ್ಷಗಿರಿ ಆಡಳಿತ ಹೊಂರಿದ ಮೊದಲ 2020 ರ ಸಾಲಿನ ಮೊದಲ ಕಾಪು ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ತೆರಿಗೆ ಏರಿಕೆ ವಿಚಾರವಾಗಿ ವಿರೋಧ ಪಕ್ಷದ ಸದಸ್ಯರು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಈ‌ ಸಂಧರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷರು ಮತ್ತು ಆಡಳಿತ ಪಕ್ಷದ ಸದಸ್ಯರು ಅಜೆಂಡಾ ಮುಗಿಯದೆ ತೆರಿಗೆ ಏರಿಕೆ ವಿಚಾರ ಮಾತುಡುವಂತಿಲ್ಲ ಎಂದು ಹೇಳಿದರು.
ತದನಂತರ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಈ ಬಗ್ಗೆ ಮಾಹಿತಿ ನೀಡಿ: ತೆರಿಗೆ ಕಾನೂನು ಸುತ್ತೋಲೆಯ ಪ್ರಕಾರ ನಡೆದಿದೆ ಎಂದರು.