ಕಾಪು ಪುರಸಭೆ ಆಡಳಿತ ಪಕ್ಷದ ವಿರುದ್ಧ ಜಿಲ್ಲಾದಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ಮನವಿ ಸಹಿತ ದೂರು ಸಲ್ಲಿಸಿದ ಬಿಜೆಪಿ:ಶಾಸಕ ಲಾಲಾಜಿ ಆರ್. ಮೆಂಡನ್

Featured, ಉಡುಪಿ

ಕಾಪು ಪುರಸಭೆ ಆಡಳಿತ ಪಕ್ಷದ ವಿರುದ್ಧ ದೂರು ಸಲ್ಲಿಸಿದ ಬಿಜೆಪಿ.

ಕಾಪು ಪುರಸಭೆಯ ಪ್ರಸ್ತುತ ಅದಿಕಾರದಲ್ಲಿರುವ ಆಡಳಿತ ಪಕ್ಷದ ಅದಿಕಾರಾªದಿ ಡಿ. 4ಕ್ಕೆ ಕೊನೆಗೊಳ್ಳುತ್ತಿದೆ. ಆಡಳಿತದ ಅವದಿ ಮುಕ್ತಾಯಗೊಂಡರೂ ಅಧ್ಯಕ್ಷ – ಉಪಾಧ್ಯಕ್ಷರು ಇನ್ನೂ ಕೂಡಾ ಆಡಳಿತದ ಗದ್ದುಗೆಯಲ್ಲಿದ್ದು ಇದು ನಿಯಮಬಾಹಿರವಾಗಿದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿರುವ ಪುರಸಭೆಯ ಮುಖ್ಯಾದಿಕಾರಿಗಳೂ ಕೂಡಾ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪುರಸಭೆ ವಿಪಕ್ಷ ಸದಸ್ಯರ ನೇತೃತ್ವದಲ್ಲಿ ಪುರಸಭೆ ಆಡಳಿತ ಮತ್ತು ಮುಖ್ಯಾದಿಕಾರಿಗಳ ವಿರುದ್ಧ ಜಿಲ್ಲಾದಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ಮನವಿ ಸಹಿತ ದೂರು ನೀಡಲಾಗಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಆಡಳಿತ ಪಕ್ಷದ ಅದಿಕಾರದ ಅವದಿ ಮುಕ್ತಾಯಗೊಂಡರೂ ಚುನಾವಣಾ ಪ್ರಕಿಯೆಗಳು ನಡೆಯುತ್ತಿಲ್ಲ. ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮುಖ್ಯಾದಿಕಾರಿಗಳು ವಾರದ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಹಾಗಿದ್ದರೂ ಇನ್ನೂ ಕೂಡಾ ಆ ಬಗ್ಗೆ ಯೋಚನೆ ಮಾಡದೇ ಇರುವುದು ಖಂಡನೀಯವಾಗಿದೆ ಎಂದು ಅವರು ಹೇಳಿದರು.
ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ಶಾಸಕರು ಮತ್ತು ಸಂಸದರಿಗೆ ಸ್ಥಾಯೀ ಸಮಿತಿ ರಚನೆ ಸಂದರ್ಭದ ಮತ ಚಲಾಯಿಸುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಮೂರನೇ ಒಂದಂಶದ ಕೋರಂ ತೋರಿಸಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಕಾಪು ಕ್ಷೇತ್ರ ಪ್ರಭಾರಿ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ನಗರ ಬಿಜೆಪಿ ಅಧ್ಯಕ್ಷ ಸಂದೀಪ್‍ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.