ಕಾಪು ಪುರಸಭೆ ಚುನಾವಣೆ- ಕಾಂಗ್ರೇಸ್ ಪಕ್ಷದಿಂದ ಮಿಂಚಿನ ಮತಬೇಟೆ: vishwanews24

Featured, ಉಡುಪಿ

ಕಾಪು ಪುರಸಭೆ ಚುನಾವಣೆ- ಕಾಂಗ್ರೇಸ್ ಪಕ್ಷದಿಂದ ಮಿಂಚಿನ ಮತಬೇಟೆ: vishwanews24

ಕಾಪು: ಇಲ್ಲಿನ ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೇಸ್ ಪಾರ್ಟಿ ವತಿಯಿಂದ ವಾರ್ಡುವಾರುಗಳಲ್ಲಿ ಮತಬೇಟೆ ಆರಂಭಗೊAಡಿದೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದ ತಂಡ ಗ್ರಾಮದ ಮೂಲೆಮೂಲೆಗೆ ಸಾಗಿ ಪುರಭೆ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಬೆಂಬಲಿಸುವAತೆ ಸಭೆ ನಡೆಸಿ ಮತಯಾಚನೆ ಆರಂಭಿಸಿದ್ದಾರೆ.


ಇAದು ಕೈಪುಂಜಾಲು ವಾರ್ಡಿನ ಅಭ್ಯರ್ಥಿ ಶೋಭ ಬಂಗೇರ ಮತ್ತು ಪೊಲಿಪು ಗುಡ್ಡೆ ವಾರ್ಡಿನ ಅಭ್ಯರ್ಥಿ ಪ್ರಭಾಕರ ಪೂಜಾರಿ ಕಾರ್ಯಕರ್ತರ ವಾರ್ಡ್ ಸಭೆ ನಡೆಸಿ ಬಿಜೆಪಿ ಅವಧಿಯಲ್ಲಿ ಆಗಿರುವ ದುರಾಡಳಿತದ ಬಗ್ಗೆ ಕಿಡಿಕಾರಿ ಕಾಂಗ್ರೇಸ್ ಪಾರ್ಟಿ ಯಾವ ಕಾರಣಕ್ಕಾಗಿ ಪುರಸಭೆ ಗದ್ದುಗೆ ಏರಬೇಕೆಂದು ಮನವರಿಕೆ ಮಾಡಿದರು.
ಈ ಸಂಧರ್ಭದಲ್ಲಿ ಕಾಪು ದಿವಾಕರ ಶೆಟ್ಟಿ, ಅಡ್ವೆ ನವೀನ್ಚಂದ್ರ ಸುವರ್ಣ,ಸರಸು ಡಿ ಬಂಗೇರ,ವಿನಯ ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.