Featured

ಕಾಪು ಪುರಸಭೆ-ಪ್ರಾಧಿಕಾರದಲ್ಲಿ ಬ್ರೋಕರ್ ಹಾವಳಿ- ವಯಾ ಇಲ್ಲಾಂದ್ರೆ ನಿಮ್ಮ ಕೆಲಸ ಆಗಲ್ಲ : vishwanews24

ಕಾಪು ಪುರಸಭೆ-ಪ್ರಾಧಿಕಾರದಲ್ಲಿ ಬ್ರೋಕರ್ ಹಾವಳಿ- ವಯಾ ಇಲ್ಲಾಂದ್ರೆ ನಿಮ್ಮ ಕೆಲಸ ಆಗಲ್ಲ : vishwanews24

ಅವಳಿ-ಜವಳಿ ಇಲಾಖೆಯ ಕಾಟಕ್ಕೆ ಕಂಗೆಟ್ಟ ಸಾರ್ವಜನಿಕರು

ಕಾಪು : ಇಲ್ಲಿನ ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸದ್ಯ ಅವಳಿ-ಜವಳಿ ಮಕ್ಕಳಂತೆ ಕಾರ್ಯನಿರ್ವಹಿಸುತ್ತಿದೇಯೆ ಎಂಬ ಅನುಮಾನ ಮತ್ತಷ್ಟು ಬಿಗುವಾಗಿದೆ.

ಈ ಎರಡೂ ಕಚೇರಿಯಲ್ಲಿ ಕೂಡ ದಾಖಲೆ-ಲೈಸನ್ಸ್-ಸರ್ವೆ- ಸೇರಿದಂತೆ ಯಾವುದೇ ಕೆಲಸ ನಡೆಯಬೇಕಾದರೂ ಕೂಡ ನೇರವಾಗಿ ಸಾರ್ವಜನಿಕ ಹೋದರೆ ಕೆಲಸಗಳು ಆಗುತ್ತಿಲ್ಲ ಬದಲಾಗಿ ವಯಾ ಬ್ರೋಕರ್ ಸಮೇತ ದಾಖಲೆ ಸಲ್ಲಿಸಿದರೆ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು ಅದಕ್ಕೆ ಪೂರಕವಾಗಿ ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಲಂಚದ ಕೋಡ್ ವರ್ಡ್ “ಪೆನ್ನ್”

ಅಸಲಿಗೆ ಕಾಪು ಪುರಸಭೆಗೆ ಆಯ್ಕೆಯಾದ ಸದಸ್ಯರು ಸಾಚರಾಗಿದ್ದರೂ ಕೂಡ ಅಧಿಕಾರ ವರ್ಗ ಮಾತ್ರ ಸಾರ್ವಜನಿಕರ ಕಿಸೆ ನೋಡಿಯೆ ಕೆಲಸ ಮಾಡುತ್ತಿದ್ದಾರೆಂಬ ಆರೋಪ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.

ನೇರವಾಗಿ ಹಣ ಕೇಳದಿದ್ದರೂ ಬ್ರೋಕರ್ ಮುಖೇನ‌ ಫೈಲ್ ಸಲ್ಲಿಸುವಾಗ ಫೀಸ್ ಜತೆಗೆ ಲಂಚದ ಹಣವೂ ಕೂಡಿರುತ್ತದೆಂಬ ಮಾತು ಚಾಲ್ತಿಯಲ್ಲಿದೆ.

ಪರಿಶೀಲನೆ-ತಪಾಸಣೆ ಎರಡಕ್ಕೂ ಒಂದೇ ಅರ್ಥವಾದರೂ ಕೂಡ ಕಾಪು ಪುರಸಭೆಯಲ್ಲಿ ಇವೆರೆಡಕ್ಕೂ ಬೇರೆ ಬೇರೆ ಅರ್ಥವಿದೆ ಯಾವುದೇ ಕಟ್ಟಡ ಮನೆ ನಿರ್ಮಾಣ ಮಾಡಬೇಕಾದರೂ ಖಾಸಾಗಿ ಕಾರು ಇಲ್ಲದೆ ಅಧಿಕಾರಿ ವರ್ಗದ ಕಾಲು ಭೂಮಿಗೆ ಇಡಲು ಸಾಧ್ಯವೇ ಇಲ್ಲ ಎಂಬ ವರ್ತನೆ ಸಾಲ‌ಮಾಡಿ ಮನೆಕಟ್ಟಲು ಹೊರಟಿರುವ ಸಾರ್ವಜನಿಕರ ಪಾಲಿಗೆ ಇರುಸು-ಮುರುಸಾಗಿದೆ.

ಪೆನ್ ಅಂದರೆ ಒಂದು ಸಾವಿರ -ಹೀಗೆ ಪೆನ್ನ್ ಲೆಕ್ಕದಲ್ಲಿ ಲಂಚವತಾರ ಪುರಸಭೆಯ ಪರಿಸರದೆಲ್ಲೆಡೆ ಗಬ್ಬು ನಾರುತ್ತಿದೆ ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ ಕಳೆದ ವಾರ ಯಾರೊಬ್ಬರೂ ಅಧಿಕಾರಿ ಪೆನ್ನ್ ಕೇಳಿದಕ್ಕೆ ” ಕೆಲಸ ಆಗುವುದಾದರೆ ಐದರ ಬದಲಿಗೆ ಇಪ್ಪತೈದ್ ಪೆನ್ನ್ ನೀಡಿದರಂತೆ ಒಬ್ಬಾತ ಆ‌ ಸಂಧರ್ಭದಲ್ಲಿಯೇ ಪೆನ್ನಿನ‌ ಅಸಲಿ ವಿಚಾರ ಹೊರಗೆ ಬಂದಿರುವಂತದ್ದು ಎಂದು ಒಳಗಿನ ಸಿಬ್ಬಂದಿಗಳು ಗುಟ್ಟಾಗಿ ಗಟ್ಟಿಯಾಗಿ ಹಾಸ್ಯ ಮಾಡುತ್ತಿದ್ದರಂತೆ .
ಇದು ಕಾಪು ಪುರಸಭೆಯ ಹಣೆಬರಹವಾದರೇ ಪ್ರಾಧಿಕಾರ ಇದಕ್ಕಿಂತಲೂ ಒಂದು ಪಟ್ಟು ಮುಂದಕ್ಕೆ ಹೋಗಿ ನಗರಾಭಿವೃದ್ಧಿ ಪ್ರಾಧಿಕಾರ ಬದಲು “ಬ್ರೋಕರಾಬೀವೃದ್ದಿ ಪ್ರಾಧಿಕಾರ ” ವಾಗಿ ಬದಲಾಗಿದೆ.
ಯಾವುದೇ ಕೆಲಸವಾಗಬೇಕಾದರೂ ಕೂಡ ವಯಾ ಬ್ರೋಕರ್ ಜತೆಗೆನೆ ನಿಮ್ಮ ಫೈಲ್ ಹೋಗಬೇಕು ಇಲ್ಲವಾದಲ್ಲಿ ಒಂದೆರಡು ಬಾರಿಗೆ ಆಗುವ ಕೆಲಸ ಎರಡು ತಿಂಗಳಾದರೂ ಆಗುವುದಿಲ್ಲ ಎಂಬ ವಿಚಾರಕ್ಕೆ ಸಾರ್ವಜನಿಕರು ಬಹಿರಂಗವಾಗಿಯೇ ಕಾಪುವಿನ‌ ಅವಳಿ ಜವಳಿ ಮಕ್ಕಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನಾದರೂ ಈ ಬಗ್ಗೆ ಉನ್ನತ ಅಧಿಕಾರಿಗಳು-ಜನಪ್ರತಿನಿಧಿಗಳು ಹೆಚ್ಚಿನ ಕ್ರಮ ವಹಿಸಿ ಜನರ ಪಾಲಿಗೆ ನೆರವಾಗಬೇಕಿದೆ.

ಬ್ಯುರೋ ರಿಪೋರ್ಟ್:vishwanews24ಕಾಪು

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago