Featured

ಕಾಪು : ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ : ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ : vishwanews24

ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ ..

ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ

ವರ್ಷಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಯಾಗುವ ರಸ್ತೆಯ ದು:ಸ್ಥಿತಿ

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡಿಗೆ ಸಂಬಂಧಿಸಿದ ಫಿಶರಿಸ್ ರಸ್ತೆಯೂ ಸಂಪೂರ್ಣ ಹದಗೆಟ್ಟ ಪರಿಣಾಮ ಪ್ರತಿದಿನ ವಾಹನ ಸವಾರರು ,ಪಾದಚಾರಿಗಳು ಸಂಕಟ ಪಡುವಂತಾಗಿದೆ.

ಗೆಸ್ಟ್ ಹೌಸ್ ಗಳ ಮೂಲದ ಮನೆ ಎಂಬಂತ್ತಿರುವ ಮೂಳೂರು ತೊಟ್ಟಂ‌ ವಾರ್ಡಿನ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಕಾಪು ದ್ವೀಪಸ್ಥಂಭ-ಮಟ್ಟು ಬೀಚ್-ಮಲ್ಪೆ ಬಂದರಿಗೆ ಸಂಪರ್ಕಕೊಂಡಿಯಾಗಿರುವ ಈ ರಸ್ತೆ ಸದ್ಯ ಕಂಬಳದ ಗದ್ದೆಯಂತೆ ಮಾರ್ಪಟ್ಟಿದೆ.

ಸುಮಾರು ಹತ್ತು ವರ್ಷದ ಹಿಂದೆ ಡಾಂಬರಿಕರಣ ಕಂಡ ಈ ರಸ್ತೆಯೂ ವಾಣಿಜ್ಯ ರಸ್ತೆಯಾಗಿಯೂ ಮಾರ್ಪಡಾಗಿದ್ದು ಘಣ ವಾಹನಗಳು ಸೇರಿದಂತೆ ಬೇರೆ ಊರಿನಿಂದ ಕೂಡ ಬೀಚ್ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಐವತ್ತಕ್ಕೂ ಅಧಿಕ ಗೆಸ್ಟ್ ಹೌಸ್ : 
ಈ ಭಾಗದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಪ್ರವಾಸಿಗರಿಗಾಗಿ ಐವತ್ತಕ್ಕೂ ಅಧಿಕ ಖಾಸಾಗಿ ಗೆಸ್ಟ್ ಹೌಸ್ ಗಳು ಕೂಡ ತಲೆ ಎತ್ತಿದ್ದು ದಿನದ ಇಪ್ಪತ್ತನಾಲ್ಕು ಗಂಟೆಯೂ ಕೂಡ ವಾಹನ ದಟ್ಟನೆ ಇರುತ್ತದೆ.

ಮಳೆಗಾಲದಲ್ಲಿ ಕೆಸರರು-ಬೇಸಿಗೆ ಧೂಳು ಹೈರಾಣು
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುತುಂಬಿ ಪಾದಚಾರಿಗಳಿಗೆ ನಡೆಯಲು ಕಷ್ಟವಾದರೆ,ಇತರ ಸಮಯದಲ್ಲಿ ಸಂಪೂರ್ಣ ಧೂಳು ಅಕ್ಕಪಕ್ಕದ ಮನೆಯೊಳಗೆ ಸೇರಿಕೊಂಡು ಸಮಸ್ಯೆಯಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಸದಸ್ಯರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಗ್ರಾಮಸ್ಥರು.

“ಮೂರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ-ಶಾಸಕರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಆದರೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ,ಮುಂದಿನ‌ ಪುರಸಭೆಯ ಸಭೆಯಲ್ಲಿ ಮತ್ತೊಂದು ಬಾರಿ ಧ್ವನಿಎತ್ತುವ ಮುಖೇನ ರಸ್ತೆ ದುರಸ್ತಿಗೆ ಆಗ್ರಹ ಮಾಡಲಾಗುತ್ತದೆ”

ಸತೀಶ್ಚಂದ್ರ : ಪುರಸಭೆ ಸದಸ್ಯರು,ತೊಟ್ಟಂ‌ವಾರ್ಡ್

“ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದೆ ಅಷ್ಟು ಮಾತ್ರವಲ್ಲದೆ ಘನವಾಹನಗಳ‌ ಸಂಚಾರ ಕೂಡ ಜಾಸ್ತಿಯಾಗಿಯೇ ಇದೆ ,ಸುಮಾರು ಹತ್ತು ವರ್ಷದ ಹಿಂದೆ ಹಾಕಿದ ಡಾಂಬರು ಸಂಪೂರ್ಣ ಮಳೆ-ಹಾಗೂ ವಾಹನದ ದಟ್ಟಣೆಯಿಂದ ಕೊಚ್ಚಿಹೋಗಿದೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ “
ಹೇಮನಾಥ್ : ಗ್ರಾಮಸ್ಥರು

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago