ಕಾಪು : ಪುರಸಭೆ ಮಾಜಿ ಉಪಾಧ್ಯಕ್ಷರ ಮನೆಯಲ್ಲಿ ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಸಹಿತ ಬೆಲೆಬಾಳುವ ಸೊತ್ತು ಕಳ್ಳತನ – vishwanews24

Featured, ಉಡುಪಿ

ಕಾಪು : ಪುರಸಭೆ ಮಾಜಿ ಉಪಾಧ್ಯಕ್ಷರ ಮನೆಯಲ್ಲಿ ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಸಹಿತ ಬೆಲೆಬಾಳುವ ಸೊತ್ತು ಕಳ್ಳತನ

ಕಾಪು: ವಿದೇಶ ಪ್ರವಾಸಕ್ಕೆ ತೆರಳಿರುವ ಕಾಪು ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌ ಅವರ ಮನೆಯಿಂದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಸಹಿತ ಬೆಲೆಬಾಳುವ ಸೊತ್ತುಗಳನ್ನು ಕದ್ದೊಯ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಕಾಪು ಪಡು ಗ್ರಾಮ ನಿವಾಸಿ ಕೆ.ಎಚ್‌. ಉಸ್ಮಾನ್‌ ಅವರು ಎರಡು ತಿಂಗಳ ಹಿಂದೆ ತನ್ನ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ದುಬಾೖಗೆ ತೆರಳಿದ್ದು, ಅವರ ಸಹೋದರ ಮನೆ ಬಳಿ ಹೋದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಜ. 22ರಿಂದ ಜ. 23ರ ನಡುವಿನ ಅಂತರದಲ್ಲಿ ಉಸ್ಮಾನ್‌ ಅವರ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 12 ಗ್ರಾಂ ತೂಕದ ಕಿವಿಯ ಚಿನ್ನದ ಬೆಂಡೋಲೆ – 2, ಚಿನ್ನದ ಪೆಂಡೆಂಟ್‌, ವಿದೇಶಿ ಕೈಗಡಿಯಾರ – 2, ವಿದೇಶಿ ಪರ್‌ಫ್ಯೂಮ್‌ – 4 ಸಹಿತ ಅಂದಾಜು 95 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಸ್ಮಾನ್‌ ಸಹೋದರ ಕೆ.ಎಚ್‌. ಅಬೂಬೂಕ್ಕರ್‌ ನೀಡಿರುವ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಕೊನೆಯ ಅವಕಾಶ – vishwanews24

ಅಕ್ಕಪಕ್ಕದವರಿಗೂ ಗೊತ್ತಾಗಿಲ್ಲ
ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲೇ ಇರುವ ಉಸ್ಮಾನ್‌ ಅವರ ಮನೆಯ ಆವರಣದಲ್ಲೇ ಕೆಲಸದವರ ಮನೆಯಿದೆ. ಮನೆಯ ಪಕ್ಕದಲ್ಲೇ ಸಹೋದರನ ಮನೆಯೂ ಇದೆ. ಇಷ್ಟಾದರೂ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಪೊಲೀಸರಿಂದ ಸೂಚನೆ
ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಹೋಗುವಾಗ ಪೊಲೀಸ್‌ ಠಾಣೆ ಅಥವಾ ಬೀಟ್‌ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಆ ಮನೆಯ ಮೇಲೆ ವಿಶೇಷ ನಿಗಾ ಇರಿಸಲು ಸಾಧ್ಯವಾಗುತ್ತದೆ. ಅಂತಹ ಮನೆಗಳಿಗೆ ಮನೆಯವರು ಸಿಸಿ ಕೆಮರಾಗಳನ್ನು ಅಳವಡಿಸಿದರೆ ಕಳ್ಳತನ ಪ್ರಕರಣ ನಡೆಯದಂತೆ ತಡೆಯಲು ಮತ್ತು ಪ್ರಕರಣ ನಡೆದರೆ ಅದನ್ನು ಭೇದಿಸಲು ಸುಲಭವಾಗುತ್ತದೆ ಎಂದು ಕಾಪು ಎಸ್‌ಐ ತೇಜಸ್ವಿ ತಿಳಿಸಿದ್ದಾರೆ.

ಉಡುಪಿ: ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಯ ಬಗ್ಗೆ ಮಾಹಿತಿಗೆ ಪೊಲೀಸರ ಮನವಿ – vishwanews24

Leave a Reply