ಕಾಪು ಪೊಲೀಸ್ ಠಾಣೆ ERSS ತುರ್ತು ವಾಹನ ಜಾಗೃತಿ ಜಾಥ
ಕಾಪು : ಒಂದು ಭಾರತ ಒಂದು ತುರ್ತುಕರೆ ಸಂಖ್ಯೆ ಪರಿಕಲ್ಪನೆಯಡಿ ಕರ್ನಾಟಕದಲ್ಲಿ 112 ಸಹಾಯವಾಣಿಯನ್ನು ಆರಂಭಿಸಲಾಗಿದೆ. 112 ಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್, ಅಗ್ನಿಶಾಮಕ, ಮತ್ತು ಆರೋಗ್ಯ ಮುಂತಾದ ಸೇವೆ ಪಡೆಯಬಹುದು. ERSS ವೆಬ್ ಸೈಟ್ ಗೆ ಭೇಟಿ ನೀಡಿ E mailಮೂಲಕ ದೂರನ್ನು ದಾಖಲಿಸಬಹುದು ಎಂಬುದರ ಕುರಿತಾದ ಜಾಗೃತಿ ಜಾಥ ಕಾಪು ಪೋಲಿಸ್ ಠಾಣೆಯ ವತಿಯಿಂದ ಆದಿತ್ಯವಾರ ನಡೆಯಿತು.
ಕರೆ ಮಾಡುವುದು ಹೇಗೆ
ಸಾಮಾನ್ಯ ಫೋನ್ ನಿಂದ 112 ಡಯಲ್ ಮಾಡಬೇಕು. ಸಾಮಾನ್ಯ ಫೋನ್ ಗಳಲ್ಲಿ 5 ಅಥವಾ 9 ಬಟನ್ ದೀರ್ಘವಾಗಿ ಒತ್ತಿದರೆ ಕರೆ ಸಕ್ರಿಯವಾಗುತ್ತದೆ. ಸ್ಮಾರ್ಟ್ ಫೋನ್ ಮೂಲಕ 112 ಸಂಖ್ಯೆಗೆ ಕರೆ ಪೊಲೀಸ್ಮಾಡಬಹುದು. ಅಥವಾ ಪವರ್ ಬಟನ್ ಮೂರು ಬಾರಿ ಒತ್ತಿದರೆ ತಕ್ಷಣ ERSS ಸಕ್ರಿಯವಾಗುತ್ತದೆ. ನಾಗರಿಕರಿಗೆ 24×7 ತುರ್ತು ಪ್ರಕ್ರಿಯೆ, ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂ ಚಾಲಿತ ಸ್ಥಳ ಗುರುತಿಸುವಿಕೆ, ತುರ್ತು ಸ್ಪಂದನ ವಾಹನಗಳು, ನೇರ ಪತ್ತೆಯ ವ್ಯವಸ್ಥೆಗೆ ಅನೂಕೂಲಗಳಾಗಿವೆ. .
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…