ಕಾಪು ಬಿಜೆಪಿಗೆ ಮತ್ತೊಂದು ಶಾಕ್, ಬಿಲ್ಲವ ಯುವ ನಾಯಕ ದಯಾನಂದ್ ಹೆಜಮಾಡಿ ಕಾಂಗ್ರೇಸ್ ಸೇರ್ಪಡೆ ಸಾಧ್ಯತೆ…? vishwa news24 EXCLUSIVE news
ಹೌದು ಕಾಪು ವಿಧಾನ ಸಭಾ ಕ್ಷೇತ್ರದ ಚುಣಾವನಾ ಲೆಕ್ಕಾಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಕಾಂಗ್ರೇಸ್ ಮತ್ತು ಬಿಜೆಪಿ ಸೇರ್ಪಡೆ ಪರ್ವ ಜೋರಾಗಿಯೇ ನಡೆಯಿತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೇಸ್‍ನ ದುರಾಡಳಿತ ಖಂಡಿಸಿ ಕೈಪುಂಜಾಲಿನ ಕಾಂಗ್ರೇಸ್ ಯುವಕರ ತಂಡವೊಂದು ಬಿಜೆಪಿ ಸೇರ್ಪಡೆಗೊಂಡಿತ್ತು. ಆದರೇ ಇದೀಗ ಸಂಘಟನೆಯಲ್ಲಿ ಚತುರತೆಹೊಂದಿರುವ ಸಾಮಾಜಿಕ ಕಳಕಳಿಯ ಹಿಂದುತ್ವದ ಪರ ಧ್ವನಿ ಎತ್ತಿದ ಯುವ ಬಿಲ್ಲವ ಉದ್ಯಮಿ ಹಾಗೂ ನಾಯಕ ದಯಾನಂದ್ ಹೆಜಮಾಡಿ ಹಾಗೂ ಬೆಂಬಲಿಗರ ಜೊತೆ ಕಾಂಗ್ರೇಸ್ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಬಲ್ಲ ಮೂಲಗಳ ಮಾಹಿತಿ ಪ್ರಕಾರ ದಯಾನಂದ್ ಹೆಜಮಾಡಿ ಮತ್ತು ಕಾಂಗ್ರೇಸ್ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿದಿದ್ದು ಕಾಲವಕಾಶ ಕೇಳಿದರೆಂಬ ಮಾಹಿತಿ ಲಭ್ಯವಾಗಿದೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ದಯಾನಂದ್ ಪ್ರಸ್ತುತ ಹೆಜಮಾಡಿ ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಯುವಕರನ್ನು ಸಂಘಟಿಸುವಿಕೆ ಮತ್ತು ಹಿಂದುತ್ವ ಪರ ಧೋರಣೆ ಹೊಂದಿದ್ದ ಇವರು ರಾಜ್ಯಮಟ್ಟದಲ್ಲಿ ಬಿಲ್ಲವ ನಾಯಕರಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

ಸೊರಕೆಗೆ ವರದಾನ
ಒಂದು ವೇಳೆ ದಯಾನಂದ್ ಹೆಜಮಾಡಿ ಕಾಂಗ್ರೇಸ್ ಸೇರ್ಪಡೆ ಖಚಿತವಾದರೆ ಯುವಕರನ್ನ ಸೆಳೆಯುವ ತಂತ್ರಗಾರಿಕೆಯ ಜೊತೆಗೆ ದೊಡ್ಡ ಮಟ್ಟದ ಯುವಕರ ತಂಡವೊಂದು ಈ ಭಾರಿ ವಿನಯ್ ಕುಮಾರ್ ಸೊರಕೆಯನ್ನ ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

“ನಾವೆಲ್ಲರೂ ದಯಾನಂದ್ ಹೆಜಮಾಡಿಯವರ ಬೆಂಬಲಿಗರು, ಅವರ ಆದರ್ಶ ಮತ್ತು ಬೆಂಬಲದಿಂದ ನಾವೂ ಈ ಹುದ್ದೆಗೆ ಬಂದು ನಿಲ್ಲಲು ಸಾಧ್ಯವಾಗಿದೆ. ವಿದೇಶ ಹಾಗೂ ಮುಂಬಯಿ, ಬೆಂಗಳೂರಿನಂತಹ ಹೊರರಾಜ್ಯದಲ್ಲಿ ದುಡಿಯುತ್ತಿರುವ ನನ್ನಂತಹ ನೂರಾರು ಯುವಕರು ಅಣ್ಣನ ಪರ ಇದ್ದೇವೆ ಅವರು ಬೆಂಬಲ ಸೂಚಿಸಿದ ಪಕ್ಷಕ್ಕೆ ನಮ್ಮ ಮತ. ಹಿಂದಿನ ದಿನದಲ್ಲೂ ಹಾಗೇ ಮುಂದೆಯೂ ಹಾಗೆ”
ದಯಾನಂದ್ ಹೆಜಮಾಡಿ ಬೆಂಬಲಿಗ, ಮುಂಬಯಿ ಉದ್ಯಮಿ.
