ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ, ಇಸ್ಲಾಂ ಶಾಂತಿ ಸೌಹಾರ್ದ ಸಾರುವ ಧರ್ಮ : ವಿನಯ್ ಕುಮಾರ್ ಸೊರಕೆ
ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಇಸ್ಲಾಂ ಶಾಂತಿ ಸೌಹಾರ್ದ ಸಾರುವ ಧರ್ಮ : ವಿನಯ್ ಕುಮಾರ್ ಸೊರಕ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರವಿವಾರ ಕಾಪು ಕೊಪ್ಪಲಂಗಡಿಯ ಕಮ್ಯೂನಿಟಿ ಹಾಲ್ ನಲ್ಲಿ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡುತ್ತಾ ” ಕಾಂಗ್ರೆಸ್ ಪಕ್ಷ ಸರ್ವ ಧರ್ಮವನ್ನ ಗೌರವಿಸುವ ಪಕ್ಷವಾಗಿದೆ, ಸರ್ವಧರ್ಮ ಸಮನ್ವಯ ಕಾಪಾಡುವಲ್ಲಿ ಎಲ್ಲರೂ ಒಂದಾಗಬೇಕು. ಇಸ್ಲಾಂ ಧರ್ಮವು ಶಾಂತಿ ಸಮಾನತೆಗಾಗಿವಹುಟ್ಟಿದ ಧರ್ಮವಾಗಿದೆ. ಪವಿತ್ರ ರಂಜಾನ್ ಹಬ್ಬ ಸರ್ವರಿಗೂ ಒಳಿತನ್ನು ಮಾಡುವಂತಾಗಲಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್ ಮಾತಾನಾಡಿ “ಉಡುಪಿ ಜಿಲ್ಲೆಯು ಸೌಹಾರ್ದಯುತವಾದ ಜಿಲ್ಲೆಯಾಗಿದೆ. ಶಾಂತಿ ನೆಮ್ಮದಿಯಿಂದ ಸರ್ವಧರ್ಮಿಯರು ಒಗ್ಗಟಾಗಿ ಬದುಕಿ ಬಾಳ ಬೇಕು. ಆಗ ಸನಾಜದ ಹಿತ ಸಾಧ್ಯ ಎಂದರು.
ಮೂಳೂರು ಅಲ್ ಇಹ್ಸಾನ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮುಸ್ತಾಫ ಸಅದಿ ಮಾತನಾಡಿ,
ಧರ್ಮದ ನಿಯಮವನ್ನ ಮೀರಿ ರಾಜಕೀಯ ಷಡ್ಯಂತ್ರಗಳು ನಡೆಯುತ್ತಿದ್ದು, ಸೌಹಾರ್ದ ಕಲಡುವ ಪ್ರಯತ್ನ ಮಾಡುವವರು ಇದ್ದಾರೆ. ಹಾಗಾಗಿ ಅದಕ್ಕೆ ಯಾರೂ ಕಿವಿಗೊಡದೆ ಒಮ್ಮತದಿಂದ ಬದುಕುತ್ತಾ ಸರ್ವೆ ಜನಾಃ ಸುಖೀನೋ ಭವತು ಎನ್ನುವಂತೆ ಬದುಕೋಣ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ ! ದೇವಿಪ್ರಸಾದ್ ಶೆಟ್ಟಿ, ಪಕ್ಷದ ಮುಖಂಡರಾದ ಕಾಪು ದಿವಾಕರ್ ಶೆಟ್ಟಿ, ವಿಲ್ಸನ್ ರೋಡಿಗ್ರಸ್, ಸರಸು ಡಿ ಬಂಗೇರ , ಗೀತಾ ವಾಗ್ಲೆ, ಅಮೀರ್ ಕಾಪು, ಸಂಧ್ಯಾ ಶೆಟ್ಟಿ, ಎಂ.ಪಿ.ಮೊಯ್ದಿನಬ್ಬ, ಅಬ್ದುಲ್ ಅಜೀಜ್, ಗಂಗಾಧರ ಸುವರ್ಣ, ಖಾಝಿ ಮಲ್ಲಾರು ಮೊದಲಾದವರು ಉಪಸ್ಥಿತರಿದ್ದರು.

