ಕಾಪು: ಭತ್ತ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆ ದರ: ಸಂಕಷ್ಟದಲ್ಲಿ ಅನ್ನದಾತ.. Vishwanews24

ಉಡುಪಿ

ಕಾಪು: ಭತ್ತ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆ ದರ: ಸಂಕಷ್ಟದಲ್ಲಿ ಅನ್ನದಾತ..

ಡಿಸಿಯ ಆರ್ಡರ್ 1800ರೂ ಆದರೆ ಕಟಾವಿಗೆ ಬರುತ್ತಿರುವ ಯಂತ್ರಗಳ ಗಂಟೆಗೆ 2500ರೂ. ದುಬಾರಿ ಬಾಡಿಗೆ ದರ ..

ಜಿಲ್ಲಾಧಿಕಾರಿಗಳು ನ್ಯಾಯ ಒದಗಿಸಬೇಕೆಂದು ರೈತರ ಒತ್ತಾಯ ..

ಕಾಪು: ಇದೀಗ ಕಟಾವಿಗೆ ಯಂತ್ರ ಬಂದಿದ್ದು, ಗಂಟೆಯೊಂದಕ್ಕೆ 2,500 ರೂ. ದುಬಾರಿ ದರ ವಿಧಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ಬಾರಿ ಭತ್ತದ ಬೇಸಾಯ ಮಾಡಬೇಕೋ? ಬೇಡವೋ? ಎಂಬ ಚಿಂತೆ ಕಾಡುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಒಂದೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಉಕ್ಕೇರಿ ಹರಿದ ಹೊಳೆಯ ನೀರು ಇವೆಲ್ಲದರ ನಡುವೆ ಹರ ಸಾಹಸಪಟ್ಟು ಭತ್ತ ಬೆಳೆಯಲಾಗಿದ್ದು, ಇದರ ನಡುವೆ ಉಭಯ ಸಂಕಟ ಅನುಭವಿಸುತ್ತಿರುವ ರೈತರು ಈ ಬಗ್ಗೆ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳು ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕಟಾವು ಯಂತ್ರಕ್ಕೆ ಗಂಟೆಗೆ 1800 ರೂ. ದರವನ್ನು ಜಿಲ್ಲಾಧಿಕಾರಿ ನಿಗದಿ ಪಡಿಸಿದ್ದರೂ ಇದೀಗ ಕಟಾವಿಗೆ ಬರುತ್ತಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಯಂತ್ರಗಳು ದುಬಾರಿ ದರ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ಹೆಚ್ಚುವರಿ ಕಟಾವು ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಒದಗಿಸಿ ಸಹಕರಿಸಬೇಕು.

ಡ್ರಗ್ಸ್ ಪ್ರಕರಣ: ಆರ್ಯನ್‌ ಖಾನ್ ಜಾಮೀನು ಅರ್ಜಿ ವಿಚಾರಣೆ ಅ.26ಕ್ಕೆ ಮುಂದೂಡಿಕೆ : ಬಾಂಬೆ ಹೈಕೋರ್ಟ್ – Vishwanews24