ಕಾಪು – ಭಾರಿ ಗಾಳಿಗೆ ಹಾರಿಹೋದ ಮನೆಯ ಮೇಲ್ಛಾವಣಿ-ಅಪಾರ ನಷ್ಟ. Vishwanews24

Featured, ಉಡುಪಿ

ಕಾಪು ಭಾರಿ ಗಾಳಿಗೆ ಹಾರಿಹೋದ ಮನೆಯ ಮೇಲ್ಛಾವಣಿ-ಅಪಾರ ನಷ್ಟ

ಕಾಪು ಭಾರಿ ಗಾಳಿಗೆ ಹಾರಿಹೋದ ಮನೆಯ ಮೇಲ್ಛಾವಣಿ-ಅಪಾರ ನಷ್ಟ

ಕಾಪು: ಕಾಪು ತಾಲ್ಲೂಕು ಪುರಸಭಾ ವ್ಯಾಪ್ತಿಯ ಪೊಯ್ಯಪೊಡಿಕಲ್ಲ ಗರಡಿ ಸಮೀಪದ ಭಾರತಿ ಭಾಸ್ಕರ್ ಸುವರ್ಣ ಎಂಬವರ ಮನೆಯ ಮೇಲ್ಛಾವಣಿ ಮಂಗಳವಾರ ಸುಮಾರು ಬೆಳಗ್ಗೆ 11ಗಂಟೆಯ ಸಮಯದಲ್ಲಿ ಬೀಸಿದ ಗಾಳಿಗೆ ಹಾರಿಹೋಗಿದ್ದು ಅಪಾರ ನಷ್ಟ ಉಂಟಾಗಿದೆ.

ಮನೆಯ ಸುಮಾರು ಅರ್ಧ ಭಾಗದಷ್ಟು ಹಂಚುಗಳು ಹಾನಿಗೊಂಡಿದ್ದು ಸ್ಥಳಿಯರು ದುರಸ್ತಿ ಕಾರ್ಯದಲ್ಲಿ ತೊಡಗಿರುವ ಬಗ್ಗೆ ವಿಶ್ವನ್ಯೂಸ್24 ಗೆ ಮಾಹಿತಿ ಲಭ್ಯವಾಗಿದೆ.