ಕಾಪು:  ಮಣಿಪುರ ಗ್ರಾಮದ 11 ವರ್ಷದ ಬಾಲಕಿ ಸಾವು – Vishwanews24

Featured, ಉಡುಪಿ

ಕಾಪು:  ಮಣಿಪುರ ಗ್ರಾಮದ 11 ವರ್ಷದ ಬಾಲಕಿ ಸಾವು

ಕಾಪು : 11 ವರ್ಷದ ಬಾಲಕಿ  ಸಾವನ್ನಪ್ಪಿದ ಘಟನೆ ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ನಡೆದಿದೆ.

ಸಂದೇಶ್‌ ಅವರ 11 ವರ್ಷದ ಪುತ್ರಿ ಧನ್ವಿ ಎಂಬುವವಳು ಮೃತಪಟ್ಟಿದ್ದಾರೆ. ಧನ್ವಿ 4ನೇ ತರಗತಿ ಮುಗಿಸಿ ಪ್ರಸ್ತುತ ಶಾಲೆಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದಳು. ಮೇ.8ರಂದು ಧನ್ವಿಯು ರಾತ್ರಿ ಎಲ್ಲರೊಂದಿಗೆ ಊಟ ಮುಗಿಸಿ ಮಲಗಿಕೊಂಡಿದ್ದು, ಮೇ. 9ರಂದು ಬೆಳಿಗಿನ ಜಾವ 3:00 ಗಂಟೆಯ ಸುಮಾರಿಗೆ ಧನ್ವಿಯು ನಿದ್ರೆಯಿಂದ ಎದ್ದು ವಾಂತಿ ಮಾಡಲು ಆರಂಭಿಸಿದ್ದಾಳೆ. ಬಳಿಕ ಧ್ವನಿಗೆ ನೀರನ್ನು ಕೊಟ್ಟು ಮಲಗಿಸಿದ್ದರೂ ಕೂಡಾ ಆಕೆ ಗಂಟೆಗೊಮ್ಮೆ ಎದ್ದು ವಾಂತಿ ಮಾಡುತ್ತಿದ್ದಳು.

ಹಾಸನ ಪೆನ್‌ಡ್ರೈವ್‌ ಪ್ರಕರಣ :  ಕಾರ್ತಿಕ್ ಹಾಗೂ ದೇವರಾಜೇಗೌಡಗೆ  ಎಸ್‌ಐಟಿ ನೋಟಿಸ್ – Vishwanews24

ನಂತರ ಮೆ. 9ರ ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕ್ಲಿನಿಕ್ಪ್ ಒಂದಕ್ಕೆ ಧ್ವನಿಯನ್ನು ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಆಕೆಗೆ ಇಂಜೆಕ್ಷನ್‌ ಹಾಗೂ ಮದ್ದನ್ನು ನೀಡಿ ಗಂಟೆಗೊಮ್ಮ ಓಆರ್‌ಎಸ್‌ ಪೌಡರ್‌ ಕೊಡುವಂತೆ ಹಾಗೂ ಗಂಜಿ ಊಟ ನೀಡುವಂತೆ ತಿಳಿಸಿದ್ದಾರೆ. ನಂತರ ಮನೆಗೆ ಬಂದ ಧನ್ವಿಯು ಆರೋಗ್ಯವಾಗಿದ್ದು, ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಕೈಕಾಲು ಸೆಲೆದುಕೊಂಡು ಪಿಟ್ಸ್‌ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಳು. ಕೂಡಲೇ ಧ್ವನಿಯ ತಂದೆ ಸಂದೇಶ್‌ ಆಕೆಯನ್ನು ತನ್ನ ರಿಕ್ಷಾದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಧನ್ವಿಯು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಧ್ವನಿಯ ತಂದೆ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 15/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

ಉಡುಪಿ: ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಿ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಉಳಿಸುವಂತೆ ಡಿಸಿಗೆ ಮನವಿ – Vishwanews24

Leave a Reply