ಕಾಪು:  ಮನೆಯಲ್ಲಿ ಅಕ್ರಮ ಸುಡುಮದ್ದು ದಾಸ್ತಾನು ; ಪೋಲೀಸರ ದಾಳಿ – vishwanews24

Featured, ಉಡುಪಿ

ಕಾಪು:  ಮನೆಯಲ್ಲಿ ಅಕ್ರಮ ಸುಡುಮದ್ದು ದಾಸ್ತಾನು ; ಪೋಲೀಸರ ದಾಳಿ

ಕಾಪು: ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಶಂಕರಪುರ ಕಡೆಯಿಂದ ಮೂಡುಬೆಟ್ಟು ದೇವಸ್ಥಾನ ಕಡೆಗೆ ಹೋಗುವ ಕಾಂಕ್ರೀಟ್‌ ಒಳ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್‌ ಎಂಬುವವರ ಮನೆಯಲ್ಲಿ ಆರೋಪಿ ಗೌತಮ್‌ ಪ್ರಭು ಎಂಬಾತನು ಅಕ್ರಮವಾಗಿ ಸುಡುಮದ್ದು (ಪಟಾಕಿ) ದಾಸ್ತಾನು ಮಾಡಿಟ್ಟಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಿವಿಧ ಕಂಪನಿಗೆ ಸೇರಿದ ಸುಡುಮದ್ದುಗಳನ್ನು ವಶಕ್ಕೆ ಪಡೆದಿದ್ದಾರೆ.

ಅ. 29 ರಂದು ಕಾಪು ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕರಾದ ತೇಜಸ್ವಿ ಟಿ.ಐ, ರವರಿಗೆ ಮಾಹಿತಿಯಂತೆ ದಾಳಿ ನಡೆಸಿ, ಒಟ್ಟು ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗೆ ಸೇರಿದ ವಿವಿಧ ಸುಡುಮದ್ದು(ಪಟಾಕಿ)ಗಳನ್ನು ಸ್ವಾಧೀನಪಡಸಿಕೊಳ್ಳಲಾಗಿದೆ.

ಉಡುಪಿ: ಸಾಂಪ್ರದಾಯಿಕ ಕಂಬಳಗಳ ದಿನಾಂಕ ನಿಗದಿ – vishwanews24

ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯಲ್ಲಿ ಅಪರಾಧ ಕ್ರಮಾಂಕ 141/2025 ಕಲಂ: 9B(1) (b) Explosive Act-1884 ಮತ್ತು ಕಲಂ: 287, 288 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply