ಕಾಪು : ಮಲ್ಲಾರು ಗ್ರಾಮದ ಅಕ್ರಮ ಕಸಾಯಿಖಾನೆಗೆ ದಾಳಿ : 12 ಲಕ್ಷಕ್ಕಿಂತ ಅಧಿಕ ಮೌಲ್ಯದ ಸೊತ್ತು ವಶ , ಇಬ್ಬರ ಸೆರೆ -Vishwanews24
ಕಾಪು : ಅಕ್ರಮ ಕಸಾಯಿಖಾನೆಗೆ ದಾಳಿ : 12 ಲಕ್ಷಕ್ಕಿಂತ ಅಧಿಕ ಮೌಲ್ಯದ ಸೊತ್ತು ವಶ , ಇಬ್ಬರ ಸೆರೆ -Vishwanews24
ಕಾಪು: ಇಲ್ಲಿಗೆ ಸಮೀಪದ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ಕುಡ್ತಿಮಾರ್ ಎಂಬಲ್ಲಿಯ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಾಪು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿ, ಎರಡು ಕಾರು, ಒಂದು ದ್ವಿಚಕ್ರ ವಾಹನ,4 ಮೊಬೈಲ್ ಹಾಗೂ ದನ ಕರುಗಳು, ಸುಮಾರು 70 ಕೆ.ಜಿ. ಮಾಂಸ ಸೇರಿದಂತೆ ಒಟ್ಟು 12,73,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಎಸ್ಡಿಎಮ್ ಕಾಲೇಜು ಬಳಿಯ ತಾವಾ(35), ಮೂಳೂರು ನಿವಾಸಿ ಮೊಯಿದಿನಬ್ಬ (26) ಬಂಧಿತರಾಗಿದ್ದು, ನೌಷಾದ್, ಶಮೀರ್ ಎಂಬವರು ಪರಾರಿಯಾಗಿದ್ದಾರೆ.
ಮಲ್ಲಾರು ಗ್ರಾಮದ ಕುಡ್ತಿಮಾರ್ ಕೈರುನ್ನಿಸಾ ಕಾಟೇಜ್ ಹೆಸರಿನ ಮನೆಯ ಕಂಪೌಂಡಿನ ಸಮೀಪ ಅಕ್ರಮವಾಗಿ ದನ ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಅವರ ನಿರ್ದೇಶನದಲ್ಲಿ ಕಾರ್ಕಳ ಉಪ ವಿಭಾಗ ಪೊಲೀಸ್ ಉಪಾಧೀಕ್ಷರಾದ ಭರತ್ ರೆಡ್ಡಿ,ಕಾಪು ಉಪ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ , ಕಾಪು ಠಾಣಾ ಪಿ.ಎಸ್.ಐ. ರಾಜಶೇಖರ್ ಬಿ. ಸಾಗನೂರ್ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ್ ಬಿಎಸ್,(ಕಾ-ಸೂ) ಅಪರಾಧ ವಿಭಾಗದ ಪಿಎಸೈ ಐ ಆರ್ .ಗಡ್ಡೆಕರ್ ಮತ್ತು ಸಿಬ್ಬಂದಿ ರವೀಂದ್ರ ,ಆನಂದ್,ಅರುಣ್,ಮಂಜುನಾಥ್,ಸಂದೇಶ್,ಪರಶುರಾಮ್,ಚಂದ್ರಶೇಖರ್,ಜಗದೀಶ್, ಮಹಾಬಲ ಮತ್ತು ಗೀತಾ ಭಾಗವಹಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
