ಕಾಪು: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಶಿಲಾಮಯ ದೇಗುಲದ ಪುನರ್‌ನಿರ್ಮಾಣಕ್ಕೆ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯು ಈಗಾಗಲೇ ನೀಲಿನಕಾಶೆ ತಯಾರಿಸಿದ್ದು. ಲೋಕೋಪಯೋಗಿ ಇಲಾಖೆಯಿಂದ ದೇವಿಯ ಗರ್ಭಗುಡಿ ಮತ್ತು ಉಚ್ಚಂಗಿ ಗುಡಿಯ ಟೆಂಡರ್ ಕರೆದು, ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿಯು ಭರದಿಂದ ಸಾಗುತ್ತಿದೆ. ಎರಡು ಗುಡಿಗಳನ್ನು ಬಾಗಲಕೋಟೆ ಜಿಲ್ಲೆಯ ಇಲ್ಕಲ್‌ನ ಕೆಂಪು ಶಿಲೆಯಿಂದ ಕೆತ್ತನೆ ಕೆಲಸವು ಸಾಗುತ್ತಿದೆ. ಮಲ್ಲಾರ್ ಗ್ರಾಮದಲ್ಲಿ ದೇವಸ್ಥಾನದ 4 ಎಕ್ರೆ ಜಾಗದಲ್ಲಿ ಕಲ್ಲಿನ ಕೆಲಸಕ್ಕಾಗಿ ಕಾರ್ಖಾನೆಯನ್ನು ತೆರೆಯಲಾಗಿದೆ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕ ಕ್ರೋಡಿಕರಣಕ್ಕಾಗಿ ಭಕ್ತರಿಂದ ಶೀಲಾಸೇವೆಯ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ಒಂದು ಶಿಲಾಸೇವೆಗೆ ರೂ.999/-, 9 ಶಿಲಾಸೇವೆಗೆ ರೂ.9999/-, 99 ಶಿಲಾಸೇವೆಗೆ ರೂ.99,999/- ನಿಗದಿಪಡಿಸಲಾಗಿದೆ. ಶಿಲಾಸೇವೆ ನೀಡುವ ಭಕ್ತರು ಸನ್ನಿಧಾನಕ್ಕೆ ಬಂದು ಶಿಲಾಸೇವೆ ನೀಡಿ ರಶೀದಿ ಮತ್ತು ಪ್ರಸಾದ ಪಡೆಯಬಹುದಾಗಿದೆ. ಅಥವಾ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಸಮಿತಿಯು ದೇಣಿಗೆ ಸಂಗ್ರಹಣೆಗೆ ಆರ್ಥಿಕ ಸಮಿತಿಯ ಸದಸ್ಯರನ್ನು ಬಿಟ್ಟು ಯಾರನ್ನೂ ಎಲ್ಲಿಯೂ ನೇಮಿಸಿಲ್ಲ ಹಾಗಾಗಿ ಯಾರು ಮೋಸಹೋಗಬಾರದು. ಪ್ರತಿಯೊಬ್ಬರೂ ತಮ್ಮ ತಮ್ಮ ಹೆಸರಿನಲ್ಲಿ ಕನಿಷ್ಠ 1 ಶಿಲಾಸೇವೆಯನ್ನಾದರೂ ಅಮ್ಮನಿಗೆ ನೀಡಿ ಕೃತಾರ್ಥರಾಗಬೇಕಾಗಿ ವಿನಂತಿಸಿದರು.
ಇದನ್ನೂ ಓದಿ : ಇನ್ನು ಮುಂದೆ ಎಂದೂ ಚುನಾವಣೆಗೆ ನಿಲ್ಲಲ್ಲ , ರಾಜಕೀಯದಿಂದ ನಿವೃತ್ತಿಯಾಗುತ್ತೇನೆ : ಕಣ್ಣೀರಿಟ್ಟ ಶಾಸಕ ಸಾ.ರಾ. ಮಹೇಶ್ -Vishwanews24
ಮಾರ್ಚ್ ತಿಂಗಳ 23ನೇ ಮಂಗಳವಾರ ಅಮ್ಮನ ಬಹುದೊಡ್ಡ ಜಾತ್ರೆ ಸುಗ್ಗಿ ಮಾರಿಪೂಜೆ ಸಂಭ್ರಮದಲ್ಲಿಯೇ ಬೆಳಿಗ್ಗೆ 9.59ಕ್ಕೆ ಸರಿಯಾಗಿ ಶಿಲಾಸೇವೆ ಸಮರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ.ಆರ್.ಮೆಂಡನ್ ವಹಿಸಿಕೊಳ್ಳಲಿದ್ದು ಹಿಂದುಳಿದ ವರ್ಗದ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್.ಭೋಜೇಗೌಡ, ಕಾಪು ಪುರಸಭಾ ಅಧ್ಯಕ್ಷ ಶ್ರೀ ಅನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಶ್ರೀ ಜಿ.ಜಗದೀಶ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಮಾಜಿ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಡಾ||ಎಂ.ಎನ್.ರಾಜೇಂದ್ರ ಕುಮಾರ್, ವಿ.ಕೆ.ಗ್ರೂಪ್ ಕಂಪನಿ ಮುಂಬೈ, ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆ.ಎಮ್. ಶೆಟ್ಟಿ ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ : ಉಡುಪಿ: ಅಜ್ಜರಕಾಡಿನಲ್ಲಿ 10 ದಿನಗಳ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ -Vishwanews24
ಸಮಿತಿಯ ಗೌರವಾಧ್ಯಕ್ಷರಾದ : ಡಾ॥ಬಿ.ಆರ್.ಶೆಟ್ಟಿ ಬಾವುಗುತ್ತು, ಶ್ರೀ ಸುಧಾಕರ ಹೆಗ್ಡೆ ತುಂಗಾ, ಶ್ರೀ ಸುಂದರ ಶೆಟ್ಟಿ ಸಾಯಿಪ್ಯಾಲೇಸ್, ಶ್ರೀ ಪ್ರಕಾಶ್ ಶೆಟ್ಟಿ ಎಮ್.ಆರ್.ಜಿ ಗ್ರೂಪ್, ಶ್ರೀ ರಾಜಶೇಖರ ಕೋಟ್ಯಾನ್ ಅಧ್ಯಕ್ಷರು ಬಿಲ್ಲವರ ಮಹಾಮಂಡಲ ಮುಲ್ಕಿ, ಶ್ರೀ ಸುಧೀರ್.ವಿ.ಶೆಟ್ಟಿ ಚರೀಷ್ಮಾ ಬಿಲ್ಡರ್ ಮುಂಬೈ, ಶ್ರೀ అనిಲ್ ಬಲ್ಲಾಳ್ ಕಾಪು ಬೀಡು. ಇವರು ಮುಖ್ಯ ರಾಮ ಶ್ರೀಯಾನ್, ಶ್ರೀಯಾನ್ ಸದನ ಕಾಪು, ಶ್ರೀ ರಾಘವೇಂದ್ರ ತಂತ್ರಿ ವಿದ್ವಾನ್ ಕೊರಂಗ್ರಪಾಡಿ, ಶ್ರೀ ವಿಕ್ರಂ ಅಧ್ಯಕ್ಷರು, ಬಿಲ್ಲವ ಸಂಘ ಕಾಪು, ಶ್ರೀ.ಡಾ| ಪ್ರಭಾಕರ ಶೆಟ್ಟಿ, ಕಾಪು.ಇವರೆಲ್ಲರೂ ಸಭೆಯಲ್ಲಿ ಭಾಗವಹಿಸುವರು. ಸಮಾರಂಭದಲ್ಲಿ ಭಾಗವಹಿಸುವ ಭಕ್ತರೆಲ್ಲರೂ ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು. ಸರತಿ-ಸಾಲಿಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸಮಾಜಿಕ ಅಂತರ ಕಾಯಬೇಕಾಗಿದೆ. ಸುರಕ್ಷತೆ ನಾಮಫಲಕವನ್ನು ಅಲ್ಲಲ್ಲಿ ಹಾಕಲಾಗಿದ್ದು, ಸಾನಿಟೈಸರನ್ನು ಬೇರೆ-ಬೇರೆ ಜಾಗದಲ್ಲಿ ಇರಿಸಲಾಗಿದೆ.ಭಕ್ತರು ಸರಾಗವಾಗಿ ದೇವಿಯ ದರ್ಶನ, ನಿಧಿಕುಂಭ ದರ್ಶನ, ಶಿಲಾಸೇವೆ ಅರ್ಪಣೆಯ ಮುಖಾಂತರ ಪುಷ್ಪಾರ್ಚನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನವದುರ್ಗೆಯರ ಹೆಸರಿನಲ್ಲಿ 9 ಕೌಂಟರ್‌ಗಳನ್ನು ರಚಿಸಲಾಗಿದ್ದು ಭಕ್ತರು ಆ ಕೌಂಟರ್‌ನಿಂದ ಶಿಲಾಸೇವೆಯ ರಶೀದಿಯನ್ನು ಪಡೆಯಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯಾ,ಯೋಗಿಶ್ ಶೆಟ್ಟಿ ಕಾಪು,ಬೆಳಪು ದೇವಿಪ್ರಸಾದ್ ಶೆಟ್ಟಿ,ಗಂಗಾಧರ ಸುವರ್ಣ,ಮಾಧವ ಪಾಲನ್ ,ಹರೀಶ್ ನಾಯಕ್ ಕಾಪು,ನಡಿಕೆರೆ ರತ್ನಾಕರ ಶೆಟ್ಟಿ,ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…