Featured

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಹಾಗೂ ಆ ಸ್ಪರ್ಧೆಯಲ್ಲೂ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಕೆ. ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸಮುದಾಯಗಳಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ನೀಡಬೇಕೆಂಬ ಬೇಡಿಕೆಗೆ ತಮ್ಮ ಬೆಂಬಲವಿದೆ ಎಂದು ಹೇಳಿದರು. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತೆ ಡಿಸಿಎಂ ಹುದ್ದೆಗಳನ್ನು ಹಂಚಿಕೆ ಮಾಡಬೇಕೆಂಬ ಅಭಿಪ್ರಾಯವನ್ನು ಪುನರುಚ್ಚರಿಸಿದರು.

“ಇದು ಹೊಸದಾಗಿ ಉದ್ಭವಿಸಿರುವ ವಿಚಾರವಲ್ಲ. ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮುದಾಯಗಳ ಪ್ರಾತಿನಿಧ್ಯದ ದೃಷ್ಟಿಯಿಂದ ಈ ಬೇಡಿಕೆ ಸಮರ್ಥನೀಯವಾಗಿದೆ” ಎಂದು ರಾಜಣ್ಣ ಹೇಳಿದರು.

ಇದೇ ವೇಳೆ, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ಅವರು ನೆನಪಿಸಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಕಳೆದ ಐದು ವರ್ಷಗಳಿಂದ ನಡೆದಿಲ್ಲ ಎಂದು ಹೇಳಿದ ರಾಜಣ್ಣ, ಈ ವಿಳಂಬದಿಂದ ರಾಜ್ಯಕ್ಕೆ ಆರ್ಥಿಕ ನಷ್ಟವಾಗುತ್ತಿದೆ ಎಂದು ಆರೋಪಿಸಿದರು. ಸ್ಥಳೀಯ ಸಂಸ್ಥೆಗಳಿಗೆ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳಡಿ ಕೇಂದ್ರ ಸರ್ಕಾರ ನೀಡಬೇಕಾದ ಅನುದಾನ ಸ್ಥಗಿತಗೊಂಡಿರುವುದು ರಾಜ್ಯದ ಪಾಲಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಆಡಳಿತ ನಡೆಸಬೇಕು. ಅಧಿಕಾರಿಗಳು ಮಾತ್ರ ಆಡಳಿತ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು,” ಎಂದು ಅವರು ಅಭಿಪ್ರಾಯಪಟ್ಟರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರದಲ್ಲಿ ನಡೆಸಿ, ಜನಪ್ರತಿನಿಧಿ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ರಾಜಣ್ಣ ಒತ್ತಾಯಿಸಿದರು.

Vishwa News 24

Recent Posts

ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ – vishwanews24

ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ ; ಮೆಟ್ರೊದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣ ರಾಜ್ಯಪಾಲರಾದ ಸುಧಾ ಯಾದವ್…

27 minutes ago

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ – vishwanews24

ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ ಮಣಿಪಾಲ: ವೇಶ್ಯಾವಾಟಿಕೆ ನಡೆಸಲು ಪಶ್ಚಿಮ ಬಂಗಾಳದಿಂದ ಮಹಿಳೆಯರನ್ನು…

1 hour ago

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ : Vishwanews24

ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ  ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ  ಮಂಗಳೂರು: ಕೊಂಚಾಡಿ ದೇರೆಬೈಲ್‌ನ ಶ್ರೀ ಕ್ಷೇತ್ರ ಮಂದಾರಬೈಲು…

2 hours ago

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ – vishwanews24

ಕಾರವಾರ: ಚಮನ್ ಮೀನು ವಿಷಕಾರಿ ಅನಿಲ ದುರಂತಕ್ಕೆ ಐವರು ಮೀನುಗಾರರು ಬಲಿ;  ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕಾರವಾರ : ಉತ್ತರ…

2 hours ago

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ – vishwanews24

ಮಂಗಳೂರು: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ : ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು: ಕೊಂಕಣ ರೈಲ್ವೆ…

2 hours ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ. ಖಾದರ್ – vishwanews24

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ.ಖಾದರ್ ಬೆಂಗಳೂರು : ಹೋಟೆಲ್, ರೆಸ್ಟೋರೆಂಟ್…

2 hours ago