ಕಾಪು : ಮಾ. 25 ಮತ್ತು 26 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – vishwanews24
ಕಾಪು : ಮಾ. 25 ಮತ್ತು 26 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ
ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಕಾಪು ಮೂರು ಮಾರಿಗುಡಿಯಲ್ಲಿ ನಡೆಯುವ 2025 ನೇ ಸಾಲಿನ ಸುಗ್ಗಿಮಾರಿಪೂಜೆಯು ಮಾರ್ಚ್ 25-26ರಂದು ನಡೆಯಲಿದೆ.
ಸುಗ್ಗಿ ಮಾರಿಪೂಜೆಯಲ್ಲಿ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಮಲೆನಾಡು, ಉತ್ತರ ಕನ್ನಡ, ಕಾಸರಗೋಡು, ಬೆಂಗಳೂರು, ಮುಂಬಯಿ ಸಹಿತವಾಗಿ ದೇಶ-ವಿದೇಶಗಳ ಲಕ್ಷಾಂತರ ಜನ ಭಕ್ತರು ಪಾಲ್ಗೊಳ್ಳುತ್ತಾರೆ. ಈ ಬಾರಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆದಿದ್ದು ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಹೊಸ ಮಾರಿಗುಡಿಯಲ್ಲಿ ಈಗಿನಿಂದಲೇ ವಿವಿಧ ಸಿದ್ಧತೆಗಳ ಜೋಡಣೆಗೆ ಚಾಲನೆ ನೀಡಲಾಗಿದೆ.

