ಕಾಪು:  ಮೀನು ಹಿಡಿಯುವಾಗ ಆಯತಪ್ಪಿ ದೋಣಿಯ ವಾಡಿ ಮೇಲೆ ಬಿದ್ದು ಮೀನುಗಾರ ಮೃತ್ಯು – vishwanews24

Featured, ಉಡುಪಿ

ಕಾಪು:  ಮೀನು ಹಿಡಿಯುವಾಗ ಆಯತಪ್ಪಿ ದೋಣಿಯ ವಾಡಿ ಮೇಲೆ ಬಿದ್ದು ಮೀನುಗಾರ ಮೃತ್ಯು

ಕಾಪು : ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಪಿತ್ರೋಡಿ ಎಂಬಲ್ಲಿ ನಡೆದಿದೆ.

ಬ್ರಹ್ಮಾವರ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ದನ ಹಾಗೂ ಕರು ಸಾವು, ಎರಡು ಜಾನುವಾರುಗಳಿಗೆ ಗಾಯ – vishwanews24

ಸ್ಥಳೀಯ ನಿವಾಸಿ ಅನಿಲ್ (46) ಮೃತಪಟ್ಟವರು. ಇವರು ಪಿತ್ರೋಡಿಯ ವಾಸು ರವರಿಗೆ ಸಂಬಂಧಿಸಿದ ದೋಣಿಯಲ್ಲಿ ಮೀನು ಹಿಡಿಯಲು ಭರತೇಶ ಎಂಬುವವರೊಂದಿಗೆ ಹೋಗಿ ಉದ್ಯಾವರ ಗ್ರಾಮದ ಪಿತ್ರೋಡಿಯ ಪಾಪನಾಶಿನಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ತಲೆ ಕೆಳಗಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಭರತೇಶರವರು ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅನಿಲ್‍ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ದನ ಹಾಗೂ ಕರು ಸಾವು, ಎರಡು ಜಾನುವಾರುಗಳಿಗೆ ಗಾಯ – vishwanews24

Leave a Reply