ಕಾಪು : ಮೂಳೂರು ಕಡಲ ತೀರದಲ್ಲಿ ತೊರಕೆ ಮೀನಿನ ಸುಗ್ಗಿ ; ಮೀನುಗಾರರ ಬಲೆಗೆ  ಬೃಹತ್‌ ತೊರಕೆ ಮೀನುಗಳು – Vishwanews24

Featured, ಉಡುಪಿ

ಕಾಪು : ಮೂಳೂರು ಕಡಲ ತೀರದಲ್ಲಿ ತೊರಕೆ ಮೀನಿನ ಸುಗ್ಗಿ ; ಮೀನುಗಾರರ ಬಲೆಗೆ  ಬೃಹತ್‌ ತೊರಕೆ ಮೀನುಗಳು

ಉಡುಪಿ,: ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಬಲೆ ಬೀಸಿದ ಮೀನುಗಾರರು ಬಲೆಗೆ ಬಿದ್ದ ಮೀನು ಕಂಡು ಹಿರಿ ಹಿರಿ ಹಿಗ್ಗಿದ್ದಾರೆ.

ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದು ಮೀನುಗಾರರಿಗೆ ಸುಗ್ಗಿಯಂತಾಗಿದೆ. ಬಲೆಗೆ ಬಿದ್ದ 50 ಕೆಜೆ ಯಷ್ಟು ತೂಕದ ನೂರಾರು ತೊರಕೆ ಮೀನುಗಳನ್ನು ನೋಡಲು ಸೇರಿದ ನೂರಾರು ಮಂದಿ ಸೇರಿದ್ದಾರೆ.

ಅಧಿಕ ತೂಕದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಕಟ್ಟಿ ಮೀನುಗಾರರು ಮೇಲೆ ಸಾಗಿಸಿದ್ದಾರೆ. ಈ ಮೀನುಗಳಿಗೆ ಕೆಜಿಗೆ 250 ರಿಂದ 300 ರೂಪಾಯಿದ್ದು ಬಹಳಷ್ಟು ಬೇಡಿಕೆ ಇದೆ.ಇತ್ತೀಚಿನ ಕಡಲಿನಲ್ಲಿ ಹೇರಳವಾಗಿ ವಿವಿಧ ಮೀನುಗಳು ಸಿಗುತ್ತಿದ್ದು ಮೀನುಗಾರರಿಗೆ ಸಂತಸ ತಂದಿದೆ.

ಶಾಸಕ ರಘುಪತಿ ಭಟ್ ಮನವಿ ಮೇರೆಗೆ ಉಡುಪಿ ತಾಲೂಕಿನ ಎಲ್ಲಾ ರಿಕ್ಷಾಗಳು ನಗರ ಗ್ರಾಮಾಂತರ ವ್ಯಾಪ್ತಿಯಲ್ಲಿ ಸಂಚರಿಸಲು ಅವಕಾಶ – Vishwanews24

Leave a Reply