ಕಾಪು ಮೆಸ್ಕಾಂ ವ್ಯಾಪ್ತಿಯಲ್ಲಿ ಮನಬಂದಂತೆ ಪವರ್ ಕಟ್ ,ಘರಂ ಆದ ಜನತೆ.

Featured, ಉಡುಪಿ

ಕಾಪು ವ್ಯಾಪ್ತಿಯಲ್ಲಿ ಮನಬಂದಂತೆ ಪವರ್ ಕಟ್ ,ಘರಂ ಆದ ಜನತೆ.

ಕಾಪು‌: ಕಾಪು ಮೆಸ್ಕಾಂ ವ್ಯಾಪ್ತಿಯಲ್ಲಿ ಮನಬಂದಂತೆ ಕಳೆದ ಒಂದು ವಾರದಿಂದ ಪವರ್ ಕಟ್ ಆರಂಭವಾಗಿದೆ.

ದಿನಕ್ಕೆ 7ರಿಂದ 8 ವಿದ್ಯುತ್ ಕಡಿತ ಮಾಡುತ್ತಿದ್ದು ಜನ‌ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತಿನಲ್ಲಿ ಪವರ್ ಕಟ್ ನಡೆಯುತ್ತಿದ್ದು ಈ ಬಗ್ಗೆ ಮೆಸ್ಕಾಂ‌ ಕಛೇರಿಗೆ ದೂರವಾಣಿ ಸಂಪರ್ಕಿಸಿದರೂ ಸರಿಯಾದ ಸಕರಾತ್ಮಾಕ ಉತ್ತರ ನೀಡದೆ ಪೋನ್ ಕಟ್ ಮಾಡುತ್ತಿರುವುದು ಕೂಡ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೆಕೆಗಾಲ ಆಗಿರುವ ಕಾರಣದಿಂದ ದಿನಕ್ಕೆ ಇಷ್ಟು ಬಾರಿ ಪವರ್ ಕಟ್ ಮಾಡಿದರೆ ಕಷ್ಟ ಅನ್ನುವ ಮಾತು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ‌ ಬರುತ್ತಿದೆ.
ಸಂಬಂಧ ಪಟ್ಟ ಇಲಾಖೆ ಈ‌ ಬಗ್ಗೆ ಸರಿಯಾದ ಕ್ರಮ‌ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.