ಕಾಪು: ಕಾಪುವಿನ ವಿಜಯ ಬ್ಯಾಂಕ್ ಮುಂಭಾಗದಲ್ಲಿ ಹಾದುಹೋಗುವ ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಾಮಗಾರಿಯ ಕಾರಣದಿಂದ ಮ್ಯಾನ್ ಹೋಲ್ ಕುಸಿದು ಮರಣ ಗುಂಡಿಯೊಂದು ಜೀವ ಬಲಿಗಾಗಿ ಬಾಯ್ದೆರೆದು ಕುಳಿತುಕೊಂಡಿದ್ದು, ರಸ್ತೆ ಸಂಚಾರಿಗಳಲ್ಲಿ ಭೀತಿ ಮೂಡಿಸಿದೆ.
ಈ ಮರಣ ಗುಂಡಿಯ ಪಕ್ಕದಲ್ಲೇ ಕಾಪು ವಿಜಯಬ್ಯಾಂಕ್ ಕಚೇರಿಯೂ ಇದ್ದು, ಬ್ಯಾಂಕ್ಗೆ ಬರುವವರಿಗೂ ಇಲ್ಲಿನ ಮಾರಣಾಂತಿಕ ಸ್ಪಾಟ್ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಸಮಸ್ಯೆ ಮತ್ತು ಅಪಾಯದ ಪ್ರದೇಶವನ್ನು ಅರಿತು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮುನ್ಸೂಚನೆಯಾಗಿ ಮರದ ಹಲಗೆ ಮತ್ತು ಕಲ್ಲುಗಳನ್ನಿಟ್ಟು ಸೌಜನ್ಯ ಮೆರೆದಿದ್ದಾರೆ.
ಗುತ್ತಿಗೆದಾರನ ನೂತನ ಕಟ್ಟಡದ ಮುಂಭಾಗವೇ ಇದೆ ಈ ಗುಂಡಿ..!
ಹೌದು ಕಾಪು ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ಗುತ್ತಿಗೆಯನ್ನ ವಹಿಸಿಕೊಂಡಿರುವ ಗುತ್ತಿಗೆದಾರನ ನೂತನ ಕಟ್ಟಡ ಕಾಮಗಾರಿ ನಡೆಯುವ ಮುಂಭಾಗವೇ ಮ್ಯಾನ್ ಹೋಲ್ ಕುಸಿದು ಮೂರು ದಿನವಾದರೂ ಅವರ ಗಮನಕ್ಕೆ ಬಾರದಿರುವುದು ಮಾತ್ರ ಹಾಸ್ಯಸ್ಪದ.
ಈ ರಸ್ತೆಯ ಮೂಲಕ ಸಂಚರಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರೂ ಸೇರಿದಂತೆ ಎಲ್ಲರೂ ಕೂಡಾ ಇಲ್ಲಿನ ಮರಣ ಗುಂಡಿಯ ಬಗ್ಗೆ ಕೂಡಾ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಪ್ರಾಣ ಹಿಂಡುವ ಗಂಭೀರ ಅವಘಡವೊಂದು ಸಂಭವಿಸಿ, ಜೀವ ಬಲಿ ನೀಡುವ ಮುನ್ನ ಇಲ್ಲಿನ ಕುಸಿದುಹೋದ ಮ್ಯಾನ್ ಹೋಲ್ ಪುನರ್ ನಿರ್ಮಿಸಿದಲ್ಲಿ ಒಳಿತು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…