ಕಾಪು ವಿಧಾನ ಸಭಾ ಕ್ಷೇತ್ರ : ಗುರ್ಮೆ-ಯಶ್ಪಾಲ್-ಶ್ರೀಶಾ-ಸುರೇಶ್ ನಾಯಕ್ ಓಕೆ ಲಾಲಾಜಿ ಯಾಕೆ…???
ಪೊಲಿಟಿಕಲ್ ಬ್ಯುರೊ :
2023 ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ದವಾಗಿದೆ ಕರಾವಳಿ ಅತ್ಯಂತ ಕುತೂಹಲದ ಕ್ಷೇತ್ರವಾಗಿರುವ ಕಾಪುವಿಗೆ ಕಾಂಗ್ರೆಸ್ ಪಾರ್ಟಿಯಿಂದ ವಿನಯ್ ಕುಮಾರ್ ಸೊರಕೆ ಫೈನಲ್ ಆದರೆ ಬಿಜೆಪಿಗೆ ಯಾರು ಎಂಬ ಪ್ರಶ್ನೆ ಸದ್ಯ ಎದ್ದಿರುವಂತದು.
ಹಾಲಿ ಶಾಸಕರಾಗಿರುವ ಲಾಲಾಜಿ ಮೆಂಡನ್ ಗೆ ಟಿಕೆಟ್ ನೀಡಿದರೆ ಬಹಿರಂಗವಾಗಿ ಬಿಜೆಪಿಯ ವಿರುದ್ಧ ಕೆಲಸಮಾಡುವುದಾಗಿ ಹೇಳಿರುವ ವಿಚಾರವೇನು ಗುಟ್ಟಾಗಿ ಉಳಿದಿಲ್ಲ ಮತ್ತು ಭ್ರಷ್ಟಾಚಾರ-ಅಕ್ರಮ ಮರಳು ದಂಧೆ-ಕಮಿಷನ್ ಇವೆಲ್ಲವುದರ ಆರೋಪದ ಪಟ್ಟಿ ಬೆನ್ನು ಬಿದ್ದ ಬೇತಾಳನಂತೆ ಹಿಂದೆಯೇ ಬರುತ್ತಿದೆ ಹಾಗಾಗಿ ರೋಸಿ ಹೋಗಿರುವ ತಳಮಟ್ಟದ ನೈಜ ಕಾರ್ಯಕರ್ತರ ಪಡೆ ಲಾಲಾಜಿಗೆ ಟೆಕೆಟ್ ನೀಡಿದರೆ ತಟಸ್ಥರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಚಾಲ್ತಿಯಲ್ಲಿರುವ ಹೆಸರಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಸುರೇಶ್ ನಾಯಕ್,ಶ್ರೀಶಾ ನಾಯಕ್ ,ಇತರೆ ಯಾರಿಗಾದರೂ ಪಕ್ಷ ಟಿಕೆಟ್ ನೀಡಿದರೆ ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಕಾರ್ಯಕರ್ತರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಇಡೀ ವಿಧಾನ ಸಭಾ ಕ್ಷೇತ್ರದಲ್ಲಿ ವಿರೋಧ ಕಟ್ಟಿಕೊಂಡಿರುವ ಲಾಲಾಜಿ ಗೆ ಈ ಸಲ ಟಿಕೆಟ್ ಯಾಕೆ ನೀಡಬೇಕೆಂದು ಚರ್ಚೆ ಆರಂಭವಾಗಿದೆ,
ಆರು ಬಾರಿ ಪಕ್ಷ ಅವಕಾಶ ನೀಡಿದ್ದು ಮೂರು ಸಲ ಗೆದ್ದು ಮೂರು ಸೋಲುವ ಮುಖೇನ ಜೀವನದಲ್ಲಿ ಬೇಕಾಗುವಷ್ಟು ಆರ್ಥಿಕ ಕ್ರೋಡೀಕರಿಸಿ ವ್ಯಾವಹಾರಿಕವಾಗಿಯೂ ಕೂಡ ಬಲಿಷ್ಠರಾಗಿಯೇ ಬೆಳೆದಿರುವ ಕಾರಣಕ್ಕೆ ಟಿಕೆಟ್ ನೀಡಬೇಕೆ ಅಥವಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೆನ್ನಹಿಂದೆ ಚೂರಿ ಹಾಕಿರುವ ಕಾರಣಕ್ಕೆ ಟಿಕೆಟ್ ನೀಡಬೇಕೆ,ದೇವಾಲಯ,ಶಾಲೆಯಲ್ಲಿ ಕೂಡ ರಾಜಕೀಯ ಚಾಲಿ ಮುಂದುವರಿಸಿರುವ ಕಾರಣಕ್ಕಾಗಿ ಟಿಕೆಟ್ ನೀಡಬೇಕೆ,ಯಾವ ಕಾರಣಕ್ಕಾಗಿ ಟಿಕೆಟ್ ನೀಡ ಬೇಕು ಎಂದು ಕಾರ್ಯಕರ್ತರ ನಡುವೆ ಚರ್ಚೆ ನಡೆಯುತ್ತಿದೆ.
ಇಂತಹ ಹಲವಾರು ಕಾರಣದಿಂದಾಗಿ ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಚಾರ್ಮ್ ಕಳೆದುಕೊಂಡಿರುವ ಶಾಸಕನಿಗೆ ಟಿಕೆಟ್ ಸಿಕ್ಕಿ ಅವಕಾಶ ದೊರೆತರೆ ಕಾಂಗ್ರೆಸ್ ಸುಲಭವಾಗಿ ಕಾಪುವಿನಲ್ಲಿ ಗದ್ದುಗೆ ಏರಲಿದೆ ಎಂಬುದು ಜನರ ಅಭಿಪ್ರಾಯ.
ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಭಾವ ಹಾಗೂ ಅಲ್ಪಮತಗಳಿಂದ ಸೋತ ಅಭ್ಯರ್ಥಿ ಎಂಬ ಅನುಕಂಪದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದ ಮೆಂಡನ್ ವಿಚಲಿತರಾಗಿದ್ದಾರೆ.
ಈ ವ್ಯಕ್ತಿಯ ಮುಂಗೋಪ,ಕಾರ್ಯಕರ್ತರ ಜತೆಗಿನ ವಿರಸ,ಗುತ್ತಿಗೆದಾರಿಕೆಯಲ್ಲಿ ಮುಸ್ಲಿಂ ಪ್ರೀತಿ, ಇವೆಲ್ಲವೂ ಕೂಡ ಶಾಸಕರಿಗೆ ಮುಳುವಾಗುವ ಸಾದ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಇವೆಲ್ಲವನ್ನೂ ಮೀರಿ ಕಾಪುವಿನಲ್ಲಿ ಲಾಲಾಜಿ ಮೆಂಡನ್ ಗೆ ಬಿಜೆಪಿ ಟಿಕೆಟ್ ನೀಡಿ ಗೆದ್ದರೆ ಅದೊಂದು ಪವಾಡವೇ ಸರಿ ಅನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…