ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲ: ಧ್ವಜಾರೋಹಣ:- vishwanews24

Featured, ಉಡುಪಿ

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲ: ಧ್ವಜಾರೋಹಣ :-Vishwanews24

ಕಾಪು : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಫೆ. 12 ರಂದು ಕುಂಭ ಸಂಕ್ರಮಣದಂದು ಧ್ವಜಾರೋಹಣ ಜರಗಿತು. ದೇಗುಲದ ಪ್ರಧಾನ ತಂತ್ರಿಗಳಾದ ವೇ| ಮೂ| ಶ್ರೀಶ ತಂತ್ರಿ ಕಲ್ಯ ಇವರ ನೇತೃತ್ವದಲ್ಲಿ ಅರ್ಚಕ ವೇ| ಮೂ| ನಾರಾಯಣ ತಂತ್ರಿಯವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಪೂರ್ವಕ ವಿವಿಧ ಧಾರ್ಮಿಕ – ವಿಧಿ ವಿಧಾನಗಳು ಜರಗಿದವು.

ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮೋಹನ್‌ ಎಂ. ಬಂಗೇರ, ಕಾರ್ಯ ನಿರ್ವಹಣಾಧಿಕಾರಿ ,ಆಡಳಿತಾಧಿಕಾರಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗಣ್ಯರಾದ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ರಮೇಶ್‌ ಹೆಗ್ಡೆ ಕಲ್ಯ, ರತ್ನಾಕರ ಹೆಗ್ಡೆ ಕಲೀಲಬೀಡು, ಯೋಗೀಶ್‌ ಶೆಟ್ಟಿ ಬಾಲಾಜಿ, ಶ್ರೀಕರ ಶೆಟ್ಟಿ ಕಲ್ಯ, ಗಂಗಾಧರ ಸುವರ್ಣ, ಸುರೇಶ್‌ ಶೆಟ್ಟಿ ಅಯೋಧ್ಯಾ, ವಿಶ್ವನಾಥ ಶೆಟ್ಟಿ ಅರಂತೊಟ್ಟು, ಶ್ರೀಧರ ಶೆಣೈ, ಉಮೇಶ್‌ ದೇವಾಡಿಗ, ಮಾಧವ ಪಾಲನ್,ಪ್ರಸಾದ್ ಕಾಮತ್,ಸಂದೀಪ್ ಶೆಟ್ಟಿ ಕಲ್ಯಾ,ರತ್ನಾಕರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು

 

 

Leave a Reply