ಕಾಪು ಶ್ರೀ ಹೊಸ ಮಾರಿಗುಡಿ : ಕೆ. ವಾಸುದೇವ ಶೆಟ್ಟಿ ಅವರಿಗೆ ರಾಜರ್ಷಿ ಬಿರುದು ಪ್ರದಾನ – vishwanews24
ಕಾಪು ಶ್ರೀ ಹೊಸ ಮಾರಿಗುಡಿ : ಕೆ. ವಾಸುದೇವ ಶೆಟ್ಟಿ ಅವರಿಗೆ ರಾಜರ್ಷಿ ಬಿರುದು ಪ್ರದಾನ
ಕಾಪು ಮಾರಿಯಮ್ಮ ದೇವಸ್ಥಾನ ಸರ್ವಾಂಗ ಸುಂದರವಾಗಿ ಮೂಡಿಬರುವಲ್ಲಿ ವಾಸುದೇವ ಶೆಟ್ಟಿ ಶ್ರಮ, ಪ್ರಯತ್ನ ಬಹಳಷ್ಟಿದೆ : ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ
ಅಮ್ಮನ ದೇವಸ್ಥಾನ ನಿರ್ಮಾಣವಷ್ಟೇ ನನ್ನ ಗುರಿಯಾಗಿತ್ತು, ಸೇವೆಯಲ್ಲಿ ಯಾವುದೇ ಫಲಾಪೇಕ್ಷೆ ಬಯಸಿಲ್ಲ : ವಾಸುದೇವ ಶೆಟ್ಟಿ
ಕಾಪು: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ನಡೆದ ಮಂಗಲ ಮಂತ್ರಾಕ್ಷತೆ ಸಂದರ್ಭ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸಮಗ್ರ ಜೀರ್ಣೋದ್ಧಾರದ ರೂವಾರಿ ಕೆ. ವಾಸುದೇವ ಶೆಟ್ಟಿ ಅವರನ್ನು ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ. ಪಿ. ಕುಮಾರ ಗುರು ತಂತ್ರಿ, ಅರ್ಚಕ ವೇ| ಕಲ್ಯ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಋತ್ವಿಜರೆಲ್ಲರೂ ಸೇರಿ ರಾಜರ್ಷಿ ಬಿರುದು ಪ್ರದಾನಿಸಿ ಗೌರವಿಸಿದರು.
ಬಿರುದು ಪ್ರದಾನಿಸಿದ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಮಾತನಾಡಿ, ಕಾಪು ಮಾರಿಯಮ್ಮ ದೇವಸ್ಥಾನವು ಸರ್ವಾಂಗ ಸುಂದರವಾಗಿ ಮೂಡಿಬರುವಲ್ಲಿ ಕೊರಂಗ್ರಪಾಡಿ ದೊಡ್ಡಮನೆ ವಾಸುದೇವ ಶೆಟ್ಟಿ ಕಾಪು ಅವರ ಶ್ರಮ, ಪ್ರಯತ್ನ ಬಹಳಷ್ಟಿದೆ. ಅಮ್ಮನ ಮಾನಸ ಪುತ್ರನಂತೆ ಅವರು ಕೆಲಸ ಮಾಡಿದ್ದಾರೆ. ಅವರ ಸೇವಾ ಗುಣಗಳನ್ನು ಗಮನಿಸಿಕೊಂಡು, ಧಾರ್ಮಿಕ ಪೂಜಾ ವಿಧಿಗಳಲ್ಲಿ ಪಾಲ್ಗೊಂಡ ವಿದ್ವಾಂಸರು, ಋತ್ವಿಜರು, ಪುರೋಹಿತರ ಅಭಿಪ್ರಾಯ ಪಡೆದು ರಾಜರ್ಷಿ ಬಿರುದು ಪ್ರದಾನಿಸಲಾಗುತ್ತಿದೆ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ : ಮಾರಿಯಮ್ಮನ ಪ್ರತಿಷ್ಠಾಪನೆ ಮಹಾ ಬ್ರಹ್ಮಕಲಶೋತ್ಸವ ಸಂಪನ್ನ – vishwanews24
ಎಲ್ಲರ ಒತ್ತಾಸೆಯಿಂದಾಗಿ ಬಿರುದನ್ನು ಸ್ವೀಕರಿಸಿದ ವಾಸುದೇವ ಶೆಟ್ಟರು ಮಾತನಾಡಿ, ಅಮ್ಮನ ದೇವಸ್ಥಾನ ನಿರ್ಮಾಣವಷ್ಟೇ ನನ್ನ ಗುರಿಯಾಗಿತ್ತು. ಅಮ್ಮನ ಸೇವೆಯಲ್ಲಿ ಆವುದೇ ಯಾವುದೇ ಫಲಾಪೇಕ್ಷೆ ಬಯಸಿಲ್ಲ. ಎಲ್ ಕರಿಸಿದ್ದೇನೆ. ಈ ಬಿರುದು ಕಾಪುವಿನ ಅಮ್ಮ ಮತ್ತು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ಕಾಪುವಿನ ಅಮ್ಮನ ಮಕ್ಕಳಿಗೆ ಸಮರ್ಪಿತವಾಗಿದೆ. ಮುಂದೆಯೂ ಕಾಪು ಮಾರಿಗುಡಿಯ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಘೋಷಿಸಿದರು. ಪ್ರಮುಖರು ಉಪಸ್ಥಿತರಿದ್ದರು.
