Featured

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮೊಳಗಲಿದೆ ಅಯೋಧ್ಯೆ ಮಾದರಿಯ ಬೃಹತ್‌ ಘಂಟೆ ನಾದ – vishwanews24

ಕಾಪು: ಹೊಸ ಮಾರಿಗುಡಿ: 1.5 ಟನ್‌ ತೂಕದ ಬೃಹತ್‌ ಘಂಟೆ

ಬೃಹತ್‌ ಗಂಟೆಯು ಭಾರತದ ಎರಡನೇ ಅತೀ ದೊಡ್ಡ ಮತ್ತು ಕರ್ನಾಟಕದ ಪ್ರಥಮ ದೊಡ್ಡ ಘಂಟೆ

ಕಾಪು: ಸಮಗ್ರ ಜೀರ್ಣೋದ್ಧಾರದೊಂದಿಗೆ ಕಂಗೊಳಿಸುತ್ತಿರುವ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಇನ್ನು ಮುಂದೆ ಅಯೋಧ್ಯೆ ಮಾದರಿಯ ಬೃಹತ್‌ ಘಂಟೆಯ ನಾದ ಮೊಳಗಲಿದೆ.

ಕಾಪು ಮಾರಿಯಮ್ಮ ದೇವಿಯ ಭಕ್ತರಾದ ಮುಂಬಯಿಯ ಅಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಯಲೇರ್ ಪ್ರೈ. ಲಿ. ನ ಸಿಎಂಡಿ ಅರವಿಂದ್‌ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಲಿರುವ ಸುಮಾರು 1,500 ಕೆಜಿ ತೂಕದ ಬೃಹತ್‌ ಗಂಟೆಯು ಭಾರತದ ಎರಡನೇ ಅತೀ ದೊಡ್ಡ ಮತ್ತು ಕರ್ನಾಟಕದ ಪ್ರಥಮ ದೊಡ್ಡ ಘಂಟೆಯಾಗಿ ಗುರುತಿಸಲ್ಪಡಲಿದೆ.

1,500 ಕೆಜಿ ತೂಕ ಮತ್ತು 5 ಫೀಟ್‌ ಎತ್ತರದ ಸಂಪೂರ್ಣ ಕಂಚಿನಿಂದ ನಿರ್ಮಾಣಗೊಂಡಿರುವ ಈ ಘಂಟೆಯು ಆಂಧ್ರಪ್ರದೇಶದ ಬಿ.ಎಸ್‌.ಎಂ. ಫೌಂಡ್ರೀಸ್‌ ಕಾರ್ಖಾನೆಯಲ್ಲಿ ಸಿದ್ಧಗೊಂಡಿದೆ. ಶುಕ್ರವಾರ ಕಾಪುವಿಗೆ ತಲುಪುವ ಬೃಹತ್‌ ಗಂಟೆಯು ಫೆ. 9ರಂದು ಸ್ವರ್ಣ ಗದ್ದುಗೆ, ರಜತ ರಥ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯ ಜತೆಗೂಡಿ ಕಾಪು ಮಾರಿಗುಡಿಗೆ ಆಗಮಿಸಲಿದೆ.

ದೇಶದ ಅತಿ ದೊಡ್ಡ ಗಂಟೆ ಅಯೋಧ್ಯೆಯಲ್ಲಿಈವರೆಗಿನ ದಾಖಲೆಯೆಂಬಂತೆ ದೇಶದ ಅತಿ ದೊಡ್ಡದಾದ ಸುಮಾರು 2,200 ಕಿ. ಗ್ರಾಂ ತೂಕದ ಬೃಹತ್‌ ಘಂಟೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿದೆ. ಮಾರಿಗುಡಿಗೆ ಸಮರ್ಪಿಸುವ ಘಂಟೆ ದೇಶದ 2ನೇ ಮತ್ತು ರಾಜ್ಯದ ಪ್ರಥಮ ಘಂಟೆಯಾಗಿ ದಾಖಲೆ ಬರೆಯಲಿದೆ.

ವಿಶೇಷತೆಗಳೇನು
ಮಾರಿಗುಡಿಯಲ್ಲಿ ಅಳವಡಿಸಲಾಗುವ ಬೃಹತ್‌ ಘಂಟೆ ಯನ್ನು ಅಷ್ಟಧಾತುವನ್ನು ಬಳಸಿ ನಿರ್ಮಿಸಲಾಗಿದೆ. ಇದು 5 ಅಡಿ ಎತ್ತರ, 4 ಅಡಿ ಅಗಲ ಹೊಂದಿದ್ದು, ಇದರ ಸದ್ದು ಕೆಲವು ಕಿಲೋ ಮೀಟರ್‌ ದೂರದವರೆಗೂ ಕೇಳಲಿದೆ.

Vishwa News 24

Recent Posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಿಲ್ಲ : ಶೋಭಾ ಕರಂದ್ಲಾಜೆ – vishwanews24

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು: ಸಿದ್ದರಾಮಯ್ಯ  ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ…

4 hours ago

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ – vishwanews24

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…

4 hours ago

ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ವಿಶೇಷ ಲಕ್ಷಪುಷ್ಪಾರ್ಚನೆ – vishwanews24

ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…

4 hours ago

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ – vishwanews24

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…

5 hours ago

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…

6 hours ago

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…

6 hours ago