Featured

ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ: vishwanews24

ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ನಡುವೆ ಸಣ್ಣ ಮಟ್ಟಿನ ಕಮ್ಯೂನಿಟಿ ವಾರ್ ನಡೆದಿದೆ.
ಹಿಂದೂ ಹುಡುಗಿಯ ಜತೆ ಅನ್ಯಕೋಮಿನ ಯುವಕ ಸಲುಗೆಯಿಂದ ಮಾತನಾಡಿದ್ದನ್ನು ಪ್ರಶ್ನಿಸಿದ್ದೆ ಈ ಘಟನೆಗೆ ಕಾರಣ ಎಂಬುದು ಮೇಲ್ನೊಟ್ಟಕ್ಕೆ ತಿಳಿದುಬಂದಿದೆ.
ಮಾತಿಗೆ ಮಾತು ಬೆಳೆದು ಎರಡು ಕಡೆಯ ವಿದ್ಯಾರ್ಥಿಗಳ ತಂಡ ಕಾಲೇಜು ಕ್ಯಾಂಪಸ್‌ನಲ್ಲಿಯೇ ಬಡಿದಾಡಿಕೊಂಡು ಕಡೆಗೆ ಪೊಲೀಸರ ಆಗಮನದಿಂದ ಎಲ್ಲಾವೂ ಶಾಂತವಾಯಿತು.

 

ಸುದ್ದಿ ಹರಡಿತ್ತು ಹೊರಗಿನ ಜನ ಬಂದು ಹೊಡೆದರು ಎಂದು..??

ಕಾಲೇಜು ಕ್ಯಾಂಪಸ್‌ನಲ್ಲಿ ಹಿಂದೂ ಮುಸ್ಲಿಂ ಯುವಕರ ಹೊಡೆದಾಟ ಶುರುವಾಗಿದೆ ಅಂದ ತಕ್ಷಣ ಅನ್ಯಕೋಮಿನ ಕಾಲೇಜು ವಿದ್ಯಾರ್ಥಿ ಹೊರಗಿನ ಯುವಕರನ್ನು ಫೋನ್ ಮುಖಾಂತರ ಕರೆಸಿ ಕ್ಯಾಂಪಸ್ ನುಗ್ಗಿ ಹಿಂದೂ ಯುವಕರಿಗೆ ಹೊಡೆದರು ಅನ್ನುವ ಸುದ್ದಿ ಇಡೀ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದ್ದಂತೆ ತಾಲೂಕಿನ ಮೂಲೆ ಮೂಲೆಯಿಂದ ಹಿಂದೂ ಪರ ಸಂಘಟಣೆಯ ಯುವಕರು ಹಾಗೂ ಮುಸ್ಲಿಂ ಸಂಘಟನೆಯ ಯುವಕರು ಕಾಲೇಜಿನ ಹೊರಭಾಗದಲ್ಲಿ ಸೇರಿಕೊಂಡರು.


ಹೊರಗಿನಿAದ ಬಂದ ಅನ್ಯಕೋಮಿನ ಯುವಕರನ್ನು ದಸ್ತಗಿರಿ ಮಾಡಿದ ಪೊಲೀಸರು

ಫೋನ್ ಕರೆಗೆ ಬುಲೆರೋ ವಾಹನದಲ್ಲಿ ಆಗಮಿಸಿ ಕ್ಯಾಂಪಸ್ ನುಗ್ಗಬೇಕು ಅನ್ನುವಷ್ಟರಲ್ಲಿ ಕಾಪು ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಅವರ ತಂಡ ಹೊರಗಿನಿಂದ ಬಂದ ಯುವಕರನ್ನು ಮತ್ತು ವಾಹನವನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆದುಕೊಂಡು ಹೋದರು.

ಸ್ಥಳದಲ್ಲಿ ಬೂದಿಮುಚ್ಚಿದ ಕೆಂಡದ ಪರಿಸ್ಥಿತಿ

ಈ ಎಲ್ಲಾ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕಾಲೇಜು ಮುಂಭಾಗ ಸುಮಾರು ೩೦೦ ಕ್ಕೂ ಅಧಿಕ ಮಂದಿ ಸೇರಿಕೊಂಡು ಅವರವವರ ಅಕ್ರೋಶ ಹೊರಹಾಕುತ್ತಿದ್ದ ಪರಿಣಾಮ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿತ್ತು.


ಠಾಣೆಗೆ ಆಗಮಿಸಿ ಮಾಹಿತಿ ಕಲೆಹಾಕಿದ ಅಡಿಷನಲ್ ಎಸ್ಪಿ ಹಾಗೂ ಉಡುಪಿ ಡಿವೈಎಸ್ಪಿ

ವಿದ್ಯಾರ್ಥಿಗಳ ಹೊಡೆದಾಡ ಕೋಮು ಬಣ್ಣ ಹಚ್ಚಿಕೊಳ್ಳುತ್ತೆ ಅನ್ನುವ ಮುಂಜಾಗ್ರತೆಯಿAದ ಕಾರ್ಕಳ ಇನ್ಸೆ÷್ಪಪೆಕ್ಟರ್, ಪಡುಬಿದ್ರಿ,ಶಿರ್ವ, ಹಾಗೂ ಉಡುಪಿ ಭಾಗದ ಪೊಲೀಸರ ದಂಡು ಕಾಪುವಿಗೆ ಆಗಮಿಸಿತ್ತು, ಕಾಲೇಜು ಕ್ಯಾಂಪಸ್ ತಿಳಿಯಾಗುತ್ತಿದ್ದಂತೆ ಹತ್ತಾರು ಜನಪ್ರತಿನಿಧಿಗಳು, ನೂರಾರು ಸಾರ್ವಜನಿಕರು ಹಾಗೂ ಹಿಂದೂ -ಮುಸ್ಲಿಂ ಪರ ಸಂಘಟನೆಯ ಕಾರ್ಯಕರ್ತರು ಕಾಪು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು ತದನಂತರ ಕಾಪು ಸಬ್ ಇನ್ಸ್ಪೆಕ್ಟರ್ ಹಾಗೂ ಕ್ರೆöÊಂ ಇನ್ಸೆ÷್ಪಕ್ಟರ್ ಘಟನೆಯ ಬಗ್ಗೆ ತಿಳಿಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಅಡಿಷನಲ್ ಎಸ್ಪಿ ಕುಮಾರಚಂದ್ರ ಹಾಗೂ ಉಡುಪಿ ಡಿ.ವೈ.ಸ್ಪಿ, ಕಾರ್ಕಳ ಸರ್ಕಲ್ ಇನ್ಸೆ÷್ಪಕ್ಟರ್ ಆಗಮಿಸಿ ಘಟನೆಯ ಮಾಹಿತಿ ಕಲೆಹಾಕಿದರು ಅನ್ನುವ ಮಾಹಿತಿ ಲಭ್ಯವಾಗಿದೆ.

ಠಾಣೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ದಂಡು
ಘಟನೆಯ ಸುದ್ದಿ ಹರಿದಾಡುತ್ತಿದ್ದಂತೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ,ವೀಣಾ ಶೆಟ್ಟಿ , ದಿನಕರ ಬಾಬು, ಗೀತಾಂಜಲಿ ಸುವರ್ಣ,ಗಂಗಾಧರ ಸುವರ್ಣ,ಅನಿಲ್ ಕುಮಾರ್, ಕಿರಣ್ ಆಳ್ವಾ, ಮೊದಲಾದ ಬಿಜೆಪಿ ಜನಪ್ರತಿನಿಧಿಗಳ ದಂಡು ದಂಡು ಠಾಣೆಯ ಮುಂದೆ ಸೇರಿತ್ತು.

ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್24 ,ಉಡುಪಿ

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago