ಕಾಪು ಸಾವಿರ ಸೀಮೆಯ ಒಡೆಯನಿಗೆ ನಾಳೆ ಸೀಯಾಳ ಅಭಿಷೇಕ : vishwanews24
ಕಾಪು ಸಾವಿರ ಸೀಮೆಯ ಒಡೆಯನಿಗೆ ನಾಳೆ ಸೀಯಾಳ ಅಭಿಷೇಕ ..
ಗ್ರಾಮದ ಪ್ರತಿಯೊಂದು ಮನೆಯಿಂದ ದೇವರಿಗೆ ಮೂರು ಸೀಯಾಳ ಸಮರ್ಪಣೆ : vishwanews24
ಕಾಪು: ಮಹಾತೋಭಾರ ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನಾಳೆ ಶುಕ್ರವಾರ ಬೆಳಗ್ಗೆ 8.30 ರಿಂದ ಜನಾರ್ಧನ ದೇವರಿಗೆ ಸೀಯಳಾಭಿಷೇಕ ಜರಗಲಿರುವುದು.
ಲೋಕಕಲ್ಯಾಣಾರ್ಥವಾಗಿ ಉತ್ತಮ ಮಳೆ ಬೆಳೆ ಸಮೃದ್ಧಿ ಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಈ ಅಭಿಷೇಕ ಕಾರ್ಯಕ್ರಮ ನಡೆಯಲಿರುತ್ತದೆ.
ಕಾಪು ಸಾವಿರ ಸೀಮೆಗೆ ಸಂಬಂಧಪಟ್ಟ ಗ್ರಾಮದ ಪ್ರತಿಯೊಂದು ಮನೆಯಿಂದ ಕನಿಷ್ಠ ಮೂರು ಸೀಯಾಳವನ್ನು ಗುರುವಾರ ಸಂಜೆಯ ಒಳಗಡೆ ದೇವಸ್ಥಾನಕ್ಕೆ ತಲುಪಿಸಬೇಕು.

ಈಗಾಗಲೇ ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಭಕ್ತರ ದಂಡು ಸೀಯಾಳವನ್ನು ತಂದೊಪ್ಪಿಸಿ ದೇವರ ಅನುಗ್ರಹ ಪ್ರಸಾದವನ್ನು ಪಡೆಯುತ್ತಿದ್ದಾರೆ.
