ಕಾಪು ಸಾವಿರ ಸೀಮೆಯ ಒಡೆಯನಿಗೆ ಸಾವಿರಕ್ಕೂ ಅಧಿಕ ಸೀಯಾಳ ಅಭಿಷೇಕ ಸಂಪನ್ನ : vishwanews24
ಕಾಪು ಸಾವಿರ ಸೀಮೆಯ ಒಡೆಯನಿಗೆ ಸಾವಿರಕ್ಕೂ ಅಧಿಕ ಸೀಯಾಳ ಅಭಿಷೇಕ ಸಂಪನ್ನ : vishwanews24
ಕಾಪು: ಮಹಾತೋಭಾರ ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ 8.30 ರಿಂದ ಜನಾರ್ಧನ ದೇವರಿಗೆ ಸೀಯಳಾಭಿಷೇಕ ವೇದಮೂರ್ತಿ, ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಮತ್ತು ಪ್ರಧಾನ ಅರ್ಚಕರಾದ ಜನಾರ್ಧನ ಭಟ್ ಅವರ ನೇತೃತ್ವದಲ್ಲಿ ಜರಗಿತು.
ಲೋಕಕಲ್ಯಾಣಾರ್ಥವಾಗಿ ಉತ್ತಮ ಮಳೆ ಬೆಳೆ ಸಮೃದ್ಧಿ ಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಿಯಾಳ ಅಭಿಷೇಕ ಮಹಾಪೂಜೆಯೊಂದಿಗೆ ಸಂಪನ್ನವಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕೆಪಿ ಆಚಾರ್ಯ ವಿಕ್ರಂ ಕಾಪು ,ಪ್ರಕಾಶ್ ಅಮ್ಮಣ್ಣಾಯ, ಸಖೇಂದ್ರ ಸುವರ್ಣ, ಲಕ್ಷ್ಮಿಕಾಂತ್ ಕಾಪು, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
