ಕಾಪು ಸಿ.ಎ ಬ್ಯಾಂಕ್ ಚುನಾವಣೆ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಬಳಗಕ್ಕೆ ಭರ್ಜರಿ ಜಯ.

Featured, ಉಡುಪಿ

ಕಾಪು ಸಿ.ಎ ಬ್ಯಾಂಕ್ ಚುನಾವಣೆ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಬಳಗಕ್ಕೆ ಭರ್ಜರಿ ಜಯ.

ಕಾಪು: ಕಾಪು‌ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಕಾಪು ಇದರ ನೂತನ‌ ಆಡಳಿತ ಮಂಡಳಿ‌‌ ಚುನಾವಣೆಯಲ್ಲಿ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಬಣದ 13 ಸದಸ್ಯರು ಗೆಲ್ಲುವುದರ ಮೂಲಕ ಭರ್ಜರಿ ಜಯಗಳಿಸಿದ್ದಾರೆ.
ಆದಿತ್ಯವಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು 13 ಸೀಟುಗಳ ಪೈಕಿ 13 ಸೀಟುಗಳನ್ನು ಡಾ.ಎಮ್ ಎನ‌್ ರಾಜೇಂದ್ರ ಕುಮಾರ್ ಬಣ ,ಕಾಪು ದಿವಾಕರ್ ಶೆಟ್ಟಿ ತಂಡ ತನ್ನ ತೆಕ್ಕೆಗೆ ಬಾಚಿಕೊಂಡಿದೆ.
ಕಾಪು ಸಿ. ಎ. ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಕೆ. ದಿವಾಕರ್ ಶೆಟ್ಟಿ, ಸುಬ್ರಹ್ಮಣ್ಯ ಬಿ. ಶೆಟ್ಟಿ, ಅಬ್ದುಲ್ ಹಮೀದ್, ಜಯಲಕ್ಷ್ಮಿ ಎಸ್. ಆಳ್ವ, ನಳಿನಿ, ಗೀತಾ, ನವೀನ್ ಶೆಟ್ಟಿ, ಭೋಜ ಎಸ್. ಅಮೀನ್, ಆರ್.ವಿ. ಪ್ರಭು, ದಿನೇಶ್ ಎ. ಸಾಲ್ಯಾನ್, ಸದಾಶಿವ ಸೆರ್ವೇಗಾರ್, ಸುಲಕ್ಷನ್ ಪೂಜಾರಿ, ಜಯ ಕೋಟ್ಯಾನ್, ಸ್ಪರ್ಧಿಸಿದ್ದರು.