ಕಾಪು ಸುಗ್ಗಿ ಮಾರಿಪೂಜೆ: ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿದ ಕಾಪು ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆ._vishwanews24
ಕಾಪು ಸುಗ್ಗಿ ಮಾರಿಪೂಜೆ: ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿದ ಕಾಪು ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆ.
ಕಾಪು: ತುಳುನಾಡಿನ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಕಾಪು ಸುಗ್ಗಿ ಮಾರಿಪೂಜೆಗೆ ಬುಧವಾರ ರಾತ್ರಿ ತೆರೆಬಿದ್ದಿದೆ.
ದೇಗುಲಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ಕಾಪು ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.
ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಸಾರ್ವಜನಿಕ ವಾಹನ ಪಾರ್ಕಿಂಗ್ ಮತ್ತು ಸುಗಮ ಸಂಚಾರಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜನರಿಗೆ ಅಡೆತಡೆ ಹಾಗೂ ನೂಕುನುಗ್ಗಲು ಆಗದ ರೀತಿಯಲ್ಲಿ ಮಾಡಿರುವ ಯೋಜಿತ ಪ್ಲ್ಯಾನ್ ಸಕ್ಸಸ್ ಕಂಡಿದೆ.
ಸರ್ಕಾರದ ಕೋವಿಡ್ ನಿಯಮ ಉಲ್ಲಂಘನೆಯಾಗದ ರೀತಿಯಲ್ಲಿ ಸಾಮಾಜಿಕ ಅಂತರದ ಅಚ್ಚುಕಟ್ಟಿನ ಬ್ಯಾರಿಗೇಟ್ ಮುಖಾಂತರ ಭಕ್ತರಿಗೆ ಸಾಗುವ ವ್ಯವಸ್ಥೆ ಮತ್ತು ಗುಂಪುಗುಂಪಾಗಿ ಜನ ಸೇರದ ರೀತಿಯಲ್ಲಿ ಹೆಚ್ಚಿನ ನಿಗಾ ವಹಿಸಿದ್ದರು.
ಮಾಸ್ಕ್ ವಿಚಾರದಲ್ಲಿ ರಾಜಿ ಮಾಡದ ಇಲಾಖೆ
ದೇಗುಲಕ್ಕೆ ಬರುವ ಭಕ್ತರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಪದೇಪದೇ ಮೈಕ್ ಮೂಲಕ ತಿಳಿಯಪಡಿಸುತ್ತಿದ್ದು ಮಾತ್ರವಲ್ಲದೆ ಮಾಸ್ಕ್ ಇಲ್ಲದೆ ಒಬ್ಬರನ್ನು ಸರತಿ ಸಾಲಿಗೆ ಸೇರಲು ಬಿಡುತಿರಲಿಲ್ಲ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸುವ ಬಗ್ಗೆ ವಾರ್ನಿಂಗ್ ಮಾಡುತಿದ್ದು ಕಂಡುಬರುತ್ತಿತ್ತು.
ಮೊಬೈಲ್ ಕಳ್ಳ- 10 ನಿಮಿಷದೊಳಗೆ ಅಂದರ್
ಮಾರಿ ಪೂಜೆಗೆ ಆಗಮಿಸಿದ ಯುವತಿಯ ಮೊಬೈಲ್ ಎಗರಿಸಿದ ಕಳ್ಳನನ್ನು ಸಿಸಿ ಕ್ಯಾಮರಾ ದೃಶ್ಯಾವಳಿಯ ಮುಖಾಂತರ ಪೊಲೀಸರ ಚಾಣಕ್ಷದಲ್ಲಿ ಕೇವಲ ಹತ್ತೆ ನಿಮಿಷದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಚೆಕ್ ಪೋಸ್ಟ್ -ಪಾರ್ಕಿಂಗ್ ಪ್ಯ್ಲಾನ್ ಸಕ್ಸಸ್
ಮಂಗಳವಾರ ಬೆಳಗ್ಗಿನ ಜಾವ ಆರು ಗಂಟೆಯಿಂದ ನಗರದೊಳಗಿನ 9 ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ವಾಹನದಟ್ಟಣೆ ನಿಯಂತ್ರಿಸುವ ಮತ್ತು ಮೊದಲೇ ನಿಗದಿ ಪಡಿಸಿದ 5 ಪಾರ್ಕಿಂಗ್ ಜಾಗದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದ್ದರಿಂದ ನಗರದೊಳಗೆ ಮತ್ತು ದೇಗುಲದ ಸುತ್ತಾಮುತ್ತಾ ಭಕ್ತರಿಗೆ ಯಾವುದೇ ರೀತಿಯಲ್ಲಿ ವಾಹನ ದಟ್ಟನೆಯ ಸಮಸ್ಯೆ ಎದುರಾಗದೇ ಇರುವುದು ಸಕ್ಸಸ್ ಖಂಡಿದೆ.
ಮಂಗಳವಾರ ಬುಧವಾರ ಸ್ಥಳದಲ್ಲಿಯೇ ಠಿಕಾಣಿಹೂಡಿದ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ಸ್.
ಮಂಗಳವಾರ ಮತ್ತು ಬುಧವಾರ ಹಗಲು ರಾತ್ರಿ ಎನ್ನದೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವಾಗದಂತೆ ಮತ್ತು ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ಹಿತದೃಷ್ಟಿಯಿಂದ ಹಾಗೂ ಸಾಮಾಜಿಕ ಅಂತರದ ಉಲ್ಲಂಘನೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾ ಮತ್ತು ಜನಪರ ಕಾಳಜಿಯಿಂದ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್,ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ತಂಡ ಮೂರು ಮಾರಿಗುಡಿಯ ಸುತ್ತಾ ಎರಡು ದಿನಪೂರ್ತಿ ಠಿಕಾಣಿ ಹೂಡಿ ಸ್ಪಂದಿಸಿರುವ ಕುರಿತಾಗಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಮಾತ್ರ ಜಾತ್ರ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಕೊವೀಡ್ ನಿಯಮ ಉಲ್ಲಂಘನೆಗೆ ಆಸ್ಪದ ನೀಡದೆ ಬಂದಿರುವ ಭಕ್ತರಿಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಕಾಪು ಪೊಲೀಸ್ ಇಲಾಖೆಗೆ ಜನ ಅಭಿನಂದನೆ ಸಲ್ಲಿಸಿದರು.
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು- ವಿಶ್ವನ್ಯೂಸ್24




