Featured

ಕಾಪು: ಸೈಬರ್ ವಂಚಕರಿಂದ ಉದ್ಯಾವರ ಫಿಶ್‌ಮಿಲ್ ಗೆ ನಕಲಿ ಇಮೇಲ್ ಕಳುಹಿಸಿ  2 ಲಕ್ಷ ಡಾಲರ್ ವಂಚನೆ – vishwanews24

ಕಾಪು: ಸೈಬರ್ ವಂಚಕರಿಂದ ಉದ್ಯಾವರ ಫಿಶ್‌ಮಿಲ್ ಗೆ ನಕಲಿ ಇಮೇಲ್ ಕಳುಹಿಸಿ  2 ಲಕ್ಷ ಡಾಲರ್ ವಂಚನೆ; ಪ್ರಕರಣ ದಾಖಲು

ಕಾಪು: ಉದ್ಯಾವರದ ಪಿತ್ರೋಡಿಯಲ್ಲಿರುವ ಫಿಶ್‌ಮಿಲ್ ಆಯಿಲ್ ಕಂಪನಿಗೆ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿ ಸೈಬರ್ ವಂಚಕರು ನಕಲಿ ಇಮೇಲ್ ಕಳುಹಿಸಿ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶಸ್ವಿ ಫಿಶ್‌ಮಿಲ್‌ನಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಆರಂಭಿಸಿರುವ ಸುರಮಿ ಘಟಕಕ್ಕೆ ಬೇಕಾಗುವ 15,00,000 ಡಾಲರಿನ ಯಂತ್ರೋಪಕರಣಗಳನ್ನು ಹಾಂಗ್‌ಕಾಂಗ್ ಮೂಲದ ವಿತರಿಕನಿಂದ ಖರೀದಿ ಮಾಡುವ ಕುರಿತು 2024ರಲ್ಲಿ ಈ-ಮೇಲ್ ಮುಖಾಂತರ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಡಿ.29ರಂದು ಫಿಶ್‌ಮೀಲ್ ಕಂಪನಿಗೆ ಫೇಕ್ ಈ- ಮೇಲ್ ಐಡಿಯಿಂದ ಸಂದೇಶ ಬಂದಿದ್ದು, ಒಪ್ಪಂದದಂತೆ ಹಣವನ್ನು ಬೇರೆ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಲಾಗಿತ್ತು.

ಅದರಂತೆ ಫಿಶ್‌ಮಿಲ್ ಕಂಪೆನಿಯವರು ಜ.23ರಂದು 2,00,000 ಡಾಲರ್ ಹಣವನ್ನು ಆ ಖಾತೆಗೆ ವರ್ಗಾಯಿಸಿದ್ದರು. ಬಳಿಕ ಈ ಬಗ್ಗೆ ಪರಿಶೀಲಿಸಿದಾಗ ಸೈಬರ್ ವಂಚಕರು ಫಿಶ್ ಮಿಲ್ ಕಂಪನಿಯ ಹಾಗೂ ಹಾಂಗ್‌ಕಾಂತ್‌ನ ವಿತರಿಕ ಕಂಪನಿಯ ಈ-ಮೇಲ್ ಐಡಿಗಳನ್ನು ಹ್ಯಾಕ್ ಮಾಡಿ ಫೇಕ್ ಈ-ಮೇಲ್ ಐಡಿ ಮೂಲಕ ಸಂಪರ್ಕ ಸಾಧಿಸಿ 2,00,000 ಡಾಲರ್ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

19 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

21 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

21 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

22 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

22 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

22 hours ago