ಕಾಪು :ಹೈಡೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರಿಗೆ ಆಕಸ್ಮಿಕ ಬೆಂಕಿ: ಟೋಲ್ ಗೇಟ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ – Vishwnaews24

Featured, ಉಡುಪಿ

ಕಾಪು :ಹೈಡೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರಿಗೆ ಆಕಸ್ಮಿಕ ಬೆಂಕಿ: ಟೋಲ್ ಗೇಟ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಕಾಪು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಟಪಾಡಿ ಬಳಿ ಹೈಡೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಟ್ಯಾಂಕರ್ ಹಿಂಬದಿ ರೌಂಡ್ ನಲ್ಲಿದ್ದ ಟೋಲ್ ಗೇಟ್ ಸಿಬ್ಬಂದಿಯವರ ಸಮಯ ಪುಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ.

ಮಹಾರಾಷ್ಟ್ರದಿಂದ ಮಂಗಳೂರು ಕಡೆಗೆ ಹೈಡೋಕ್ಲೋರಿಕ್ ಆಮ್ಲ ತುಂಬಿ ಸಾಗುತ್ತಿದ್ದ ಟ್ಯಾಂಕರ್‌ ಟಯರ್ ಬ್ಲಾಸ್ಟ್ ಆಗಿ ಆಕಸ್ಮಿಕ ಬೆಂಕಿ ಸಂಭವಿಸಿದೆ. ಲಾರಿಯ ಹಿಂದಿನಿಂದ ಬರುತ್ತಿದ್ದ ಟೋಲೈಟ್ ರೌಂಡ್ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯರು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಹೆದ್ದಾರಿ ಸುರಕ್ಷಾ ಅಧಿಕಾರಿ ಶೈಲೇಶ್ ಶೆಟ್ಟಿ, ಮನೋಹರ್ ಹೆಜಮಾಡಿ ಸಹಿತ ಟೋಲೇಟ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ಕೊಡುತ್ತಿದ್ದು ಇದರ ವಿರುದ್ದ ಹೋರಾಟಕ್ಕೆ ಬಿಜೆಪಿಯೇತರ ಎಲ್ಲ ಪಕ್ಷಗಳೂ ಒಟ್ಟಾಗಬೇಕು : ಸಿದ್ದರಾಮಯ್ಯ, – Vishwanews24

Leave a Reply