ಕಾಪು ಹೊಸಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ: ಮೂಳೂರಿನಲ್ಲಿ ವಾರ್ಡ್ ,ಗ್ರಾಮ ,ಸಮಿತಿ ರಚನೆ ಸಭೆ :vishwanews24
ಕಾಪು ಹೊಸಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ: ಮೂಳೂರಿನಲ್ಲಿ ವಾರ್ಡ್ ,ಗ್ರಾಮ ,ಸಮಿತಿ ರಚನೆ ಸಭೆ : vishwanews24
ಕಾಪು: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸಮಾರಿಯಮ್ಮ ದೇವಸ್ಥಾನದ ವಿವರಗಳನ್ನು ಭಕ್ತಾಧಿಗಳ ಮನಮುಟ್ಟುವಂತೆ ತಿಳಿಸಿ ಈ ಭಾಗದ ಗ್ರಾಮದ ಸರ್ವರ ಸಹಕಾರ ಪಡೆದು ಎಲ್ಲಾ ಭಕ್ತಾಧಿಗಳನ್ನು ಇದರಲ್ಲಿ ತೊಡಗಿಸಿಕೊಂಡು ಉತ್ತಮ ಅವಕಾಶವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪಸ್ಥಿತಿಯಲ್ಲಿ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಡ್ ಸಮಿತಿ ರಚನೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ,ಅಧ್ಯಕ್ಷ ವಾಸುದೇವ ಶೆಟ್ಟಿ, ವಿವಿಧ ಪದಾಧಿಕಾರಿಗಳಾದ ಕಾಪು ದಿವಾಕರ ಶೆಟ್ಟಿ ,ಲೀಲಾಧರ ಶೆಟ್ಟಿ, ಮಾದವ ಪಾಲನ್,ಕಲ್ಯಾ ಶ್ರೀಕರ ಶೆಟ್ಟಿ, ಬಾಲಾಜಿ ಯೋಗಿಶ್ ಶೆಟ್ಟಿ, ಪುರಸಭಾ ಸದಸ್ಯ ಸತೀಶ್ಚಂದ್ರ,ಮಾಜಿ ಸದಸ್ಯೆ ಸುಲೋಚನ ಬಂಗೇರ,ಗ್ರಾಮಸ್ಥರಾದ ಮನೋಹರ್ ಅಡ್ಯಂತಾಯ ಪ್ರಭಾತ್ ಶೆಟ್ಟಿ,ಸುಧೀರ್ ಶೆಟ್ಟಿ, ವೀರಕೇಸರಿ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.


