Featured

ಕಾಪು ಹೊಸ ಮಾರಿಗುಡಿಯ ರಾಜ್ಯ ಸರಕಾರ ನೇಮಿಸಿದ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಬಾರಿ ಅನ್ಯಾಯ : ನವೀನ್ ಎಸ್.ಕೆ – vishwanews24

ಕಾಪು ಹೊಸ ಮಾರಿಗುಡಿಯ ರಾಜ್ಯ ಸರಕಾರ ನೇಮಿಸಿದ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಬಾರಿ ಅನ್ಯಾಯ : ನವೀನ್ ಎಸ್.ಕೆ

ಇತ್ತೀಚೆಗೆ ನವೀಕೃತಗೊಂಡು ದೇಶ-ವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಹೊಸ ಮಾರಿಗುಡಿಯ ವ್ಯವಸ್ಥಾಪನ ಸಮಿತಿಯು ಮಾಜಿ ಸಚಿವರ ಶಿಫಾರಸ್ಸಿನ ಮೇರೆಗೆ ಆಯ್ಕೆಗೊಂಡಿರುತ್ತದೆ. ಸದ್ರಿ ಸಮಿತಿಯಲ್ಲಿ ಆಯ್ಕೆಗೊಂಡ ಮೊಗವೀರ ಸಮುದಾಯದ ಶ್ರೀಧರ್ ಕಾಂಚನ್‌ರವರ ಅಕಾಲಿಕ ನಿಧನದಿಂದ ಈ ಸ್ಥಾನ ತೆರವುಗೊಂಡಿರುತ್ತದೆ. ಸದ್ರಿ ಸ್ಥಾನಕ್ಕೆ ಮೊಗವೀರ ಸಮಾಜ ಬಾಂಧವರನ್ನೇ ಆಯ್ಕೆ ಮಾಡದೆ ಆಡಳಿತ ಪಕ್ಷದ ಮಾಜಿ ಸಚಿವರಿಂದ ಅನ್ಯಾಯವಾಗಿರುತ್ತದೆ.

ಈ ಸಂಬಂಧ ಪಕ್ಷಾಂತರಿಯಾದಂತಹ ಕಿರಣ್ ಕುಮಾರ್‌ರವರು ಸ್ಥಳೀಯ ಜನಪ್ರತಿನಿಧಿಯಿಂದ ಮೊಗವೀರರ ಅವಗಣನೆ ಎಂದು ಬಾಲಿಷ ಹೇಳಿಕೆ ನೀಡಿರುತ್ತಾರೆ. ಮಾಜಿ ಸಚಿವರು ಕ್ಷೇತ್ರದ ಎ, ಬಿ, ಸಿ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ  ಸಮಿತಿಗೆ ತನ್ನ ಹಿಂಬಾಲಕರನ್ನೇ ಆಯ್ಕೆ ಮಾಡಿ ಹಿಂದೂ ದೇವಸ್ಥಾನಗಳಲ್ಲಿ ರಾಜಕೀಯಗೊಳಿಸುತ್ತಿರುವುದು ಈತನಿಗೆ ತಿಳಿದಿಲ್ಲವೇ, ಸದಾ ಪಕ್ಷಾಂತರ ಮಾಡಿಕೊಂಡು ನಾಯಕರ ಓಲೈಕೆ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಈತನಿಗೆ ಸಂಘಟಿತ ಮೊಗವೀರ ಸಮಾಜಕ್ಕೆ ತಪ್ಪು ಅಭಿಪ್ರಾಯ ನೀಡುವುದೇ ಈತನ ಚಾಳಿಯಾಗಿರುತ್ತದೆ.

ರಾಜ್ಯದ ಆಡಳಿತ ಪಕ್ಷದ ಪ್ರತಿನಿಧಿಗಳಿಂದ ಶಿಫಾರಸ್ಸು ಪತ್ರ ನೀಡಿದಲ್ಲಿ ಮಾತ್ರ ಈ ಆಯ್ಕೆ ನಡೆಯುತ್ತದೆ. ಈ ಆಯ್ಕೆ ಮಾಜಿ ಸಚಿವರ ನೇತೃತ್ವದಲ್ಲಿ ನಡೆದಿದ್ದು ಜಗಜಾಹಿರ, ಮೊಗವೀರ ಸಮಾಜ ತನ್ನ ಪ್ರಾತಿನಿಧ್ಯವನ್ನು ಕೇಳಿಕೊಂಡಾಗ ಈ ರೀತಿ ಪಕ್ಷಾಂತರಿಗಳಿಂದ ಹೇಳಿಕೆ ನೀಡಿಸುತ್ತಿರುವುದು ಹಾಸ್ಯಾಸ್ಪದ. ಕಾಪು ವಿಧಾನಸಭಾ ಕ್ಷೇತ್ರದ ಎಲ್ಲಾ ದೇವಸ್ಥಾನಗಳಲ್ಲಿ ತನ್ನ ಹಿಂಬಾಲಕರನ್ನೇ ಆಯ್ಕೆ ಮಾಡಬೇಕೆಂದು ತಾಕೀತು ಮಾಡುವ ಮಾಜಿ ಸಚಿವರಿಗೆ ಈ ಆಯ್ಕೆ ತನ್ನ ಗಮನಕ್ಕೆ ಬಾರದೆ ತನ್ನದೇ ಪಕ್ಷದ ವಿಧಾನಪರಿಷತ್‌ ಸದಸ್ಯರೇ ಆಯ್ಕೆ ಮಾಡಿದ್ದಾರೆ ಎಂದು ಹೇಳಿಕೆ ನೀಡುವುದು ತಮ್ಮದೇ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ನಿದರ್ಶನ.

ಸತತ ಎರಡು ಚುನಾವಣೆಯಲ್ಲಿ ಸೋತು ಹತಾಶೆಯಿಂದ ಇನ್ನೂ ಹೊರಬರದ ಮಾಜಿ ಸಚಿವರು ಏನು ಕಿಮ್ಮತ್ತು ಇಲ್ಲದ ಪಕ್ಷಾಂತರಿಗಳಿಂದ ಹೇಳಿಕೆ ನೀಡಿಸುತ್ತಿರುವುದು ಖಂಡನೀಯ. ಎಂದು ನವೀನ್ ಎಸ್‌.ಕೆ  ಬಿಜೆಪಿ ಮಂಡಲ ಕಾಪು ಇವರು ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ.

 

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

8 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

17 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

17 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

17 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

17 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago