Featured

ಕಾಪು : KMJ SYS SSF ವತಿಯಿಂದ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಸನ್ಮಾನ – vishwanews24

ಕಾಪು : KMJ SYS SSF ವತಿಯಿಂದ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಸನ್ಮಾನ

ಕಾಪು: ಬೆಳಪು ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿ ಗ್ರಾಮವಾಗಿ ಅಭಿವೃದ್ಧಿ ಮಾಡಿ, ಕುಗ್ರಾಮವಾಗಿದ್ದ ಬೆಳಪು ಗ್ರಾಮದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಎಂಬ ತ್ರಿವಳಿ ಮಂತ್ರದೊಂದಿಗೆ ಗ್ರಾಮವನ್ನು ಅಭಿವೃದ್ಧಿಯ ತುತ್ತತುದಿಗೆ ತಂದು ನಿಲ್ಲಿಸಿದ ದೇವಿಪ್ರಸಾದ್ ಶೆಟ್ಟಿಯವರಿಗೆ, ಕರ್ನಾಟಕ ಮುಸ್ಲಿಂ ಜಮಾತ್, SYS ಹಾಗೂ SSF ಬೆಳಪು ಶಾಖೆಯ ವತಿಯಿಂದ ತಾಜುಲ್ ಉಲಮಾ ಭವನದಲ್ಲಿ, ಸನ್ಮಾನಿಸಲಾಯಿತು.

ಬೆಳಪು ಬದರ್ ಜಾಮೀಯಾ ಮಸ್ಜಿದ್ ಖತೀಬರಾದ, ಬಹು ಅಬ್ದುಲ್ ರಶೀದ್ ಸಖಾಫಿಯವರು ಸ್ವಾಗತ ಬಾಷಣ ಮಾಡಿದರು. ಇದೇ ವೇಳೆ ಮಾತಾಡಿದ ಅಬ್ದುಲ್ ರಶೀದ್ ಸಖಾಫಿಯವರು, ಭೂಮಿಯಲ್ಲಿ ಜೀವಂತ ಇರುವಾಗ ಮಾತ್ರವಲ್ಲ ನಂತರದ ಕಾಲದಲ್ಲೂ ಕೆಲವರ ಹೆಸರನ್ನು ನಾವು ಸ್ಮರಿಸಿಕೊಳ್ಳುತ್ತೇವೆ, ಯಾಕೆಂದರೆ ಅವರು ತಮ್ಮ ಜೀವಿತಾವಧಿವಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿರುತ್ತಾರೆ, ಹಲವಾರು ಸಾಧನೆಗಳನ್ನು ಮಾಡಿರುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀ, ದೇಶವನ್ನು ಆಳಿದ ಹಾಗೂ ಹಲವಾರು ಸ್ಮಾರಕಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ರಾಜರು, ತಾಜುಲ್ ಉಲಮಾರವರಂತಹ ಮಹಾತ್ಮರು, ಇವರೆಲ್ಲಾ ಇಂದಿಗೂ ನಮ್ಮ ನೆನಪಿನಲ್ಲಿ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ಅವರು ಜೀವನದಲ್ಲಿ ಮಾಡಿದ ಉತ್ತಮ ಕಾರ್ಯಗಳು, ಅದೇ ರೀತಿ ಏನೂ ಅಲ್ಲದ ಬೆಳಪು ಗ್ರಾಮದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶಿಕ್ಷಣ ಕ್ರಾಂತಿಯನ್ನೇ ಸೃಷ್ಟಿಸಿ, ವಿಶ್ವ ವಿದ್ಯಾನಿಲಯ, ಕಾಲೇಜುಗಳು LKG ಯಿಂದ ಡಿಪ್ಲೋಮ ತನಕ ಉಚಿತ ಶಿಕ್ಷಣ ವ್ಯವಸ್ಥೆ,ಎಲ್ಲವೂ ಬೆಳಪು ಗ್ರಾಮದಲ್ಲಿ ನಿರ್ಮಾಣ ಆಗುವಂತೆ ಮಾಡಿದ್ದು, ಕಾಲ ಕಾಲಕ್ಕೆ ದೇವಿಪ್ರಸಾದ್ ಶೆಟ್ಟಿಯವರ ಹೆಸರು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು.

ಇದೇ ವೇಳೆ ಸನ್ಮಾನಿತ ಡಾ ದೇವಿಪ್ರಸಾದ್ ಶೆಟ್ಟಿ ಮಾತಾಡಿ, ಕಾಡಿನಂತಿದ್ದ ಬೆಳಪು ಗ್ರಾಮ ಇಂದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೈಗಾರಿಕಾ ಪಾರ್ಕ್, ಅತ್ಯಾಧುನಿಕ ವಿಜ್ಞಾನ ಸಂಶೋಧನೆ ಕೇಂದ್ರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮೌಲಾನ ಆಜಾದ್ ಮಾದರಿ ಶಾಲೆ, ಎಲ್ಲವೂ ಆರಂಭವಾಗುತ್ತಿದೆ, ಗ್ರಾಮದ ಬಡ ವಿದ್ಯಾರ್ಥಿಗಳು ಕೂಡ ಅತ್ಯುತ್ತಮ ಶಿಕ್ಷಣ ಕಲಿಯಬೇಕು, ಗ್ರಾಮದ ಯಾರೊಬ್ಬರೂ ವಿಧ್ಯೆಯಿಂದ ವಂಚಿತರಾಗಬಾರದು, ಎನ್ನುವ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಹುಟ್ಟುಹಾಕುತ್ತಿದ್ದೇವೆ, ಅದೇ ರೀತಿ ಗಾಂಜಾಮುಕ್ತ, ಮಾದಕ ದ್ರವ್ಯ ಮುಕ್ತ ಗ್ರಾಮವಾಗಿ ರೂಪಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ, ಸ್ವಚ್ಛ ಸುಂದರ ಬೆಳಪು ಗ್ರಾಮ ನಿರ್ಮಾಣ ಆಗಬೇಕಾದರೆ ರಸ್ತೆ ಬದಿ, ಎಲ್ಲೆಂದರಲ್ಲಿ ಕಸ ಹಾಕಬೇಡಿ, ಎಂದು ಹೇಳಿದರು. ಇದೇ ವೇಳೆ KMJ SYS SSF ಸದಸ್ಯರು, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರ ಸಮ್ಮುಖದಲ್ಲಿ ಗ್ರಾಮದಲ್ಲಿ ಕೋಮುಸೌಹಾರ್ದತೆ ಕಾಪಾಡಿ, ಶಾಂತಿಯನ್ನು ಸದಾ ಕಾಪಾಡುತ್ತೇವೆ, ಗಾಂಜಾ ಹಾಗೂ ಮಾದಕ ದ್ರವ್ಯದ ವಿರುದ್ಧ ಅಭಿಯಾನ ಕೈಗೊಂಡು, ಅಂತಹಾ ದುಶ್ಚಟಗಳಿಗೆ ನಾವು ಬಲಿಯಾಗುವುದಿಲ್ಲ, ರಸ್ತೆಯಲ್ಲಿ ಕಸ ಎಸೆಯುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ವೇಳೆ ತಾಜುಲ್ ಉಲಮಾ ಭವನದ ಅಧ್ಯಕ್ಷರಾದ ನಝೀರ್ ಬೆಳಪು, ಕೋಶಾಧಿಕಾರಿ ಮುಹಮ್ಮದ್ ಮೋನು,ವಿಶೇಷ ಅತಿಥಿಯಾದ ಇಮ್ತಿಯಾಜ್ ಕೃಷ್ಣಾಪುರ,SYS ಅಧ್ಯಕ್ಷರಾದ ಅಬ್ದುಲ್ ಕರೀಂ ಹಾಜಿ ಕಳತ್ತೂರ್, SYS ಕಾರ್ಯದರ್ಶಿ ಮಯ್ಯದ್ದಿ ಬೆಳಪು, ಕೋಶಾಧಿಕಾರಿ ಅಬ್ಬಾಸ್ ವಿನಯನಗರ, SSF ಅಧ್ಯಕ್ಷರಾದ ಸಾದಿಕ್ ವಿನಯ ನಗರ, ಕಾರ್ಯದರ್ಶಿ ನುಹ್ಮಾನ್, ಬದರ್ ಜಾಮೀಯಾ ಮಸ್ಜಿದ್ ನ ಉಸ್ತಾದರುಗಳು, ಉಪಸ್ಥಿತರಿದ್ದರು, ಅಮೀರ್ ಬೆಳಪು ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

9 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 day ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

1 day ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago