ಕಾರು ಹಾಗೂ ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ಐವರು ವಿದ್ಯಾರ್ಥಿಗಳ ಸಾವು – vishwanews24

Featured, ರಾಷ್ಟ್ರ ನ್ಯೂಸ್

ಕಾರು ಹಾಗೂ ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ಐವರು ವಿದ್ಯಾರ್ಥಿಗಳ ಸಾವು

ಚೆನ್ನೈ: ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ವಿಧ್ಯಾರ್ಥಿಗಳು ಸಾವನಪ್ಪಿದ ಘಟನೆ ಚೆನ್ನೈ-ತಿರುಪತಿ ರಾಷ್ಟ್ರೀಯ ಹೆದ್ದಾರಿಯ ತಿರುವಳ್ಳೂರು ಎಂಬಲ್ಲಿ ನಡೆದಿದೆ.

ಮೃತರನ್ನು ಚೈತನ್ಯ (21), ವಿಷ್ಣು (21), ಚೇತನ್, ಯುಕೇಶ್, ನಿತೀಶ್, ವರ್ಮಾ, ರಾಮ್‌ಕೋಮನ್ ಎಂದು ಗದುರುತಿಸಲಾಗಿದೆ. ಎಲ್ಲರೂ ಚೆನ್ನೈ ಎಸ್‌ಆರ್‌ಎಂ. ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು, ಈ ವೇಳೆ ನಿನ್ನೆ ರಜೆ ಇದ್ದ ಕಾರಣ 5 ಮಂದಿ ಚಿತ್ತೂರು ಜಿಲ್ಲೆಯ ಕಣ್ಣಿಪಾಕ್ಕಂ ವಿನಾಯಕ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳಿ ಚೆನ್ನೈಗೆ ವಾಪಸಾಗಿದ್ದರು. ತಿರುವಳ್ಳೂರು ಜಿಲ್ಲೆಯ ರಾಮಂಚೇರಿಯಲ್ಲಿ ಕಾರು ಸಾಗುತ್ತಿದ್ದಾಗ ರಾಜಸ್ಥಾನ ನೋಂದಣಿ ಫಲಕದ ಕಂಟೈನರ್ ಲಾರಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ನವಿಲು ಸಾಂಬರ್ ಮಾಡಿ ವಿಡಿಯೋ ಅಪ್ಲೋಡ್ ;  ಯೂಟ್ಯೂಬರ್ ಅರೆಸ್ಟ್ – vishwanews24

ಇದರಲ್ಲಿ ಚೇತನ್, ಯುಕೇಶ್, ನಿತೀಶ್, ವರ್ಮಾ ಮತ್ತು ರಾಮಕೋಮನ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚೈತನ್ಯ ಮತ್ತು ವಿಷ್ಣು ಎಂಬ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ತಿರುವಳ್ಳೂರು ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಪೆರುಮಾಳ್ ಭೇಟಿ ನೀಡಿ ವಾಹನದಲ್ಲಿ ಸಿಲುಕಿದ್ದ ಯುವಕರ ಮೃತದೇಹಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕನಕಮ್ಮಸತ್ರಂ ಪೊಲೀಸ್ ಇಲಾಖೆ ಅಪಘಾತದ ತನಿಖೆ ನಡೆಸುತ್ತಿದೆ. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ವಿಟ್ಲ : ದ್ವಿಚಕ್ರ ವಾಹನ ಹಾಗೂ ಖಾಸಗಿ ಬಸ್  ಢಿಕ್ಕಿ ; ಸವಾರ ಗಂಭೀರ ಗಾಯ – vishwanews24

ಅಪಘಾತದಲ್ಲಿ ಮೃತಪಟ್ಟ 5 ಜನರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳೂರ್ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರು ಆಂಧ್ರಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply