ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಆರೋಪಿ ಬಂಧನ – Vishwanews24
ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಆರೋಪಿ ಬಂಧನ – Vishwanews24
ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ದನದ ಮಾಂಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದಲ್ಲಿ ನಡೆದಿದೆ. ದನದ ಮಾಂಸ ಮಾಡುತ್ತಿದ್ದ ರಹೀಂ ಬಂಧನಕ್ಕೊಳಗಾದ ಆರೋಪಿಯಾಗಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ್ದ ಕಾರ್ಕಳ ಪೊಲೀಸರು ಮನೆಯ ಸಮೀಪದಲ್ಲೆ ದನಗಳನ್ನು ಕಟ್ಟಿಕೊಂಡು ಮಾಂಸ ತಯಾರಿಸುತ್ತಿದ್ದ ರಹೀಂನನ್ನು ಬಂಧಿಸಿ,5 ದನ ಮತ್ತು 25 ಕೆಜಿ ದನದ ಮಾಂಸ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯಲಾದ ದನವನ್ನು ಗೋಶಾಲೆಗೆ ಹಸ್ತಾಂತರ ಮಾಡಲಾಯಿತು. ಕಾರ್ಕಳ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
