ಉಡುಪಿ,: ಇದೇ ಮೊದಲ ಬಾರಿಗೆ ಕಾರ್ಕಳದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ (49) ಅವರು ಒಟ್ಟು 38.43 ಕೋಟಿ ರೂ. ಘೋಷಿತ ಆದಾಯ ಹೊಂದಿದ್ದಾರೆ.
ಉದಯ ಕುಮಾರ್ ಶೆಟ್ಟಿ ಅವರು 31.83 ಕೋಟಿ ರೂ. ಚರಾಸ್ಥಿಯನ್ನು ಹೊಂದಿದ್ದರೆ, 6.60 ಕೋಟಿ ರೂ. ಸ್ಥಿರಾಸ್ಥಿಯನ್ನು ಸಹ ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅವರು 7.45 ಕೋಟಿ ರೂ. ಸಾಲವನ್ನು ಸಹ ಹೊಂದಿದ್ದಾರೆ.
ಉದಯ ಅವರ ಪತ್ನಿ ಅವರ ಒಟ್ಟು ಆದಾಯ 24.16 ಕೋಟಿ ರೂ. ಆಗಿದ್ದು, ಇದರಲ್ಲಿ ಚರಾಸ್ಥಿ ಮೌಲ್ಯ 12.28 ಕೋಟಿ ರೂ. ಆದರೆ, ಸ್ಥಿರಾಸ್ಥಿ ಮೌಲ್ಯ 11.88 ಕೋಟಿ ರೂ.ಗಳಾಗಿವೆ. ಇದರೊಂದಿಗೆ ಪತ್ನಿ ಹೆಸರಿನಲ್ಲಿ 2.94 ಕೋಟಿ ರೂ. ಸಾಲವೂ ಇದೆ. ಉದಯ ಶೆಟ್ಟಿ ಅವರ ಇಬ್ಬರು ಅವಲಂಬಿತ ಮಕ್ಕಳ ಹೆಸರಿನಲ್ಲಿ 45.29 ಲಕ್ಷ ಹಾಗೂ 31.96 ಲಕ್ಷ ರೂ. ಆದಾಯವನ್ನು ತೋರಿಸಲಾಗಿದೆ.
ಸರಕಾರದಿಂದ ಬಾಕಿ 26 ಕೋಟಿ ರೂ. ಪಿಡಬ್ಲ್ಯುಡಿಯಲ್ಲಿ ಕ್ಲಾಸ್ 1 ಗುತ್ತಿಗೆದಾರರಾಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾದ ಸಾಲದ ಮೊತ್ತ 26.15 ಕೋಟಿ ರೂ. ಎಂದು ತೋರಿಸಲಾಗಿದೆ.
ಈ ಸಾಲ 2013-14ನೇ ಸಾಲಿನಿಂದ 2019-20ರವೆರೆಗೆ ಉದಯ ಶೆಟ್ಟಿ ಅವರು ಮಾಡಿದ ಸರಕಾರದ ಕಾಮಗಾರಿಗೆ ನೀಡಬೇಕಾದ ಗುತ್ತಿಗೆ ಮೊತ್ತವಾಗಿದೆ. 2013-14ರಲ್ಲಿ 22.95ಲಕ್ಷರೂ., 2014-15ರಲ್ಲಿ 1.40 ಕೋಟಿ ರೂ., 2015-16ರಲ್ಲಿ 53.98ಲಕ್ಷ ರೂ., 2016-17ರಲ್ಲಿ 49.49 ಲಕ್ಷ ರೂ., 2017-18ರಲ್ಲಿ 14.54 ಕೋಟಿ ರೂ., 2018- 19ರಲ್ಲಿ 8.72 ಕೋಟಿ ರೂ. ಹಾಗೂ 2019-20ರಲ್ಲಿ 21.96 ಲಕ್ಷ ರೂ. ಗುತ್ತಿಗೆ ಬಾಕಿ ಉದಯ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾಗಿದೆ. ಈ ಸಾಲವನ್ನು ವಿವಾದಿತ ಸಾಲ ಎಂದು ಕರೆಯಲಾಗಿದೆ.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…