ಕಾರ್ಕಳ : ಕಾಂಗ್ರೆಸ್  ಕಾರ್ಯಕರ್ತ ಬಿಜೆಪಿ ಸೇರ್ಪಡೆ – Vishwanews24

Featured, ಉಡುಪಿ

ಕಾರ್ಕಳ : ಕಾಂಗ್ರೆಸ್  ಕಾರ್ಯಕರ್ತ ಬಿಜೆಪಿ ಸೇರ್ಪಡೆ

ಕಾರ್ಕಳ : ಭಾರತೀಯ ಜನತಾ ಪಕ್ಷದ ಸಿದ್ದಾಂತ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಆಡಳಿತ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕುಚ್ಚೂರು ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಕಾನ್ಬೆಟ್ಟು ಬಡ್ತನಬೈಲು ಮಾನಸ್ ನಾಯ್ಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಸಚಿವ ವಿ. ಸುನೀಲ್‌ ಕುಮಾರ್‌ ಅವರು ಪಕ್ಷದ ಬಾವುಟ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರವಾದ ನಾಯಕತ್ವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ಆಡಳಿತ ಮತ್ತು ಸಚಿವ ವಿ. ಸುನೀಲ್‌ ಕುಮಾರ್‌ ಅವರ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ ತಾನು ಬಿಜೆಪಿ ಸೇರ್ಪಡೆಯಾಗಿರುವುದಾಗಿ ಮಾನಸ್ ನಾಯ್ಕ ತಿಳಿಸಿದರು.

ಮಂಗಳೂರು :  ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವರ್ಗಾವಣೆ – ಕುಲದೀಪ್ ಕುಮಾರ್ ಜೈನ್ ನೂತನ ಆಯುಕ್ತ – Vishwanews24

ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಯುವಮೋರ್ಚಾ ಅಧ್ಯಕ್ಷ ಸುಹಾಸ್‌ ಶೆಟ್ಟಿ ಹಾಗೂ ಸ್ಥಳೀಯ ಗ್ರಾಮ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply