Featured

ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರ ಆಸ್ತಿ ವಿವರ – Vishwanews24

ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರ ಆಸ್ತಿ ವಿವರ

ಕಾರ್ಕಳ ;ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ರೂ. 5.63 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಸುನಿಲ್‌ ಅವರ ಕುಟುಂಬದ ಬಳಿ ಒಟ್ಟು 7.98 ಕೋಟಿ ರೂ. ಆಸ್ತಿ ಇದೆ. ಪತ್ನಿ ಪ್ರಿಯಾಂಕಾ 1.80 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ತಂದೆ ವಾಸುದೇವ ಎಂ.ಕೆ. ಅವರ 54.14 ಲಕ್ಷ ರೂ. ಮೌಲ್ಯದ ಆಸ್ತಿಯೂ ಸೇರಿದೆ. ಸುನಿಲ್‌ 45.16 ಲಕ್ಷ ರೂ. ಸಾಲ ಹೊಂದಿದ್ದಾರೆ.

24.60 ಲಕ್ಷ ರೂ. ಬೆಲೆಯ ಇನ್ನೋವಾ ಕಾರನ್ನು ಹೊಂದಿದ್ದು ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ಸಹಿತ ಒಟ್ಟು 12.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ 4.06 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಸುನಿಲ್‌ ಒಟ್ಟು 1. 60 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಅವರ ಪತ್ನಿ 1.43 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸುನಿಲ್‌ ವಿವಿಧೆಡೆ ಒಟ್ಟು 10.27 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಇದರ ಮೌಲ್ಯ ರೂ.1.04 ಕೋಟಿ ರೂ. ಹಾಗೂ 148.97 ಸೆಂಟ್ಸ್‌ ಕೃಷಿಯೇತರ ಭೂಮಿಯನ್ನು ಹೊಂದಿದ್ದು ಅದರ ಮೌಲ್ಯ 24.96 ಲಕ್ಷ ರೂ. ಆಗಿದೆ. ಪತ್ನಿ ಕಡ್ತಲ ಗ್ರಾಮದಲ್ಲಿ ಒಟ್ಟು 4.18 ಎಕರೆ ಕೃಷಿಭೂಮಿ ಹೊಂದಿದ್ದು, ಇದರ ಮೌಲ್ಯ 37.62 ಲಕ್ಷ ರೂ. ಆಗಿದೆ.

ನಿಟ್ಟೆ ಗ್ರಾಮದಲ್ಲಿ 5014 ಚ.ಅಡಿ ವಿಸ್ತೀರ್ಣದ ವಸತಿ ಕಟ್ಟಡವನ್ನು ಹೊಂದಿದ್ದಾರೆ. ಸಂಬಳ, ಗುತ್ತಿಗೆ ಬಾಡಿಗೆ ಕೃಷಿ ಹಾಗೂ ಬ್ಯಾಂಕ್‌ ಠೇವಣಿಯ ಬಡ್ಡಿಯಿಂದ ವರ್ಷಕ್ಕೆ 77.02 ಲಕ್ಷ ರೂ. ವರಮಾನ ಹಾಗೂ ಪತ್ನಿಗೆ ಬ್ಯಾಂಕ್‌ ಬಡ್ಡಿ ಹಾಗೂ ಕೃಷಿಯಿಂದ ವಾರ್ಷಿಕ 15.26 ಲಕ್ಷ ರೂ. ವರಮಾನ ಬರುತ್ತಿದೆ. ತಂದೆಗೆ ಪಿಂಚಣಿ ಹಾಗೂ ಬ್ಯಾಂಕ್‌ ಬಡ್ಡಿಯಿಂದ ವಾರ್ಷಿಕ 6.73 ಲಕ್ಷ ರೂ. ವರಮಾನ ಬರುತ್ತಿದೆ.

ಸುನಿಲ್‌ ಬಳಿ 272.70 ಗ್ರಾಂ ಚಿನ್ನಾಭರಣವಿದ್ದು, ಅದರ ಮೌಲ್ಯ 14.31 ಲಕ್ಷ ರೂ. ಹಾಗೂ ಪತ್ನಿ ಬಳಿ 2,230 ಗ್ರಾಂ ಚಿನ್ನಾಭರಣವಿದ್ದು ಇದರ ಮೌಲ್ಯ ರೂ. 1.17 ಕೋಟಿ ರೂ. ಪತ್ನಿ 10.60 ಕೆ.ಜಿ ಬೆಳ್ಳಿಯನ್ನು ಹೊಂದಿದ್ದು ಅದರ ಮೌಲ್ಯ 7.42 ಲಕ್ಷ ರೂ. ಆಗಿದೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago